ಮಾನವನ ಆರ್ಥಿಕ ಚಟುವಟಿಕೆಗಳು


ಮಾನವನ ಆರ್ಥಿಕ ಚಟುವಟಿಕೆಗಳು

ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.

ಆರ್ಥಿಕ ಉದ್ಯೋಗಗಳೆಂದರೇನು?

ಉತ್ತರ :ಮಾನವನು ಆಹಾರ, ಉಡುಪು.ವಸತಿ ಹಾಗೂ ಇನ್ನಿತರ ಹಲವಾರು ಬೇಡಿಕೆಗಳನ್ನು ಹೊಂದಿರುವನು. ಇವುಗಳ ಪೂರೈಕೆಗಾಗಿಹಲವಾರು ಚಟುವಟಿಕೆಗಳನ್ನು ರೂಡಿಕೊಂಡಿದ್ದುಇವುಗಳನ್ನೇ“ಆರ್ಥಿಕಚಟುವಟಿಕೆಉದ್ಯೋಗಿಗಳೆಂದುಆತನುಕರೆಯುವರು.

2. ಪ್ರಾಥಮಿಕ ಆರ್ಥಿಕ ವೃತ್ತಿಗಳೆಂದರೇನು?

ಉತ್ತರ: ಪ್ರಾಕೃತಿಕ ಸಂಪನ್ಮೂಲಗಳು ಹೊರತೆಗೆಯುವಿಕೆ ಹಾಗೂ ಉತ್ಪಾದನೆಯಲ್ಲಿ ತೊಡಗಿರುವ ಮನುಷ್ಯನ ಎಲ್ಲಾ ಚಟುವಟಿಕೆಗಳನ್ನು“ಪ್ರಾಥಮಿಕ ಆರ್ಥಿಕ ಉದ್ಯೋಗಗಳೆಂದು (Primary Occupations) ಕರೆಯುವರು.



3. ದ್ವಿತೀಯ ಆರ್ಥಿಕ ವೃತ್ತಿಗಳೆಂದರೇನು?

ಉತ್ತರ: ಕಚ್ಚಾವಸ್ತುಗಳನ್ನು ಹೆಚ್ಚು ಉಪಯುಕ್ತ ಹಾಗೂ ಮೌಲ್ಯವುಳ್ಳ ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗಳನ್ನು ದ್ವಿತೀಯ ಆರ್ಥಿಕ ಉದ್ಯೋಗಳೆಂದು ಕರೆಯುವರು.

4. ಮರಕಡಿಯುವ ಉದ್ಯಮ ಎಂದರೇನು?

ಉತ್ತರ: ಅರಣ್ಯ ಸಂಪನ್ಮೂಲಗಳನ್ನು ಸಂಗ್ರಹಿಸುವುದನ್ನು ಮರಕಡಿಯುವುದು ಎನ್ನುವರು ಉದಾಹರಣೆಗೆ ಮರಮುಟ್ಟುಗಳ ಸಂಗ್ರಹ.

5. ಬೇಟೆಗಾರಿಕೆ ಎಂದರೇನು?

ಉತ್ತರ: ಆಹಾರ,ಚರ್ಮ,ಮಾರಾಟ ಹಾಗೂ ಕ್ರೀಡೆಗಾಗಿ ವನ್ಯ ಜೀವಿಗಳನ್ನು ಬೇಟೆಯಾಡುವುದನ್ನು ಬೇಟೆಗಾರಿಕೆ ಎನ್ನುವರು.

6. ವ್ಯವಸಾಯ ಎಂದರೇನು?

ಉತ್ತರ: ಮಣ್ಣನ್ನು ಉಳುಮೆ ಮಾಡಿ ಬೆಳೆಗಳನ್ನು ಬೆಳೆಯುವ ಕಲೆಯನ್ನು “ವ್ಯವಸಾಯ”ವೆಂದು ಕರೆಯುತ್ತಾರೆ.

ಇದನ್ನು ಓದಿ :-ಭಾರತ ಇತಿಹಾಸದ ಪ್ರಮುಖವಾದ ಪ್ರಶ್ನೆ ಮತ್ತು ಉತ್ತರಗಳು 

7. ಪ್ರಾಣಿಸಾಕಾಣಿಕೆ ಎಂದರೇನು?

ಉತ್ತರ: ಹಾಲು, ಮಾಂಸ,ಮೂಳೆ ಚರ್ಮ ಕೂದಲು ಮತ್ತು ಉಣ್ಣೆ ಮುಂತಾದ ನಿರ್ದಿಷ್ಟ ಉಪಯೋಗಗಳಿಗಾಗಿ ಪ್ರಾಣಿಗಳನ್ನು ಸಾಕುವುದನ್ನು ಪ್ರಾಣಿ ಸಾಕಾಣಿಕೆಯನ್ನುವರು.

8. ಕೈಗಾರಿಕೆ ಎಂದರೇನು?

ಉತ್ತರ: ಪ್ರಾಕೃತಿಕವಾಗಿ ಉತ್ಪಾದಿಸಲ್ಪಡುವ ವಸ್ತುಗಳನ್ನು ಮನುಷ್ಯನಿಗೆ ಹೆಚ್ಚು ಉಪಯೋಗವಾಗುವಂತೆ ಪರಿವರ್ತಿಸುವ ಪ್ರಕ್ರಿಯೆಯನ್ನು ಕೈಗಾರಿಕೆಯೆಂದು ಕರೆಯುವರು.

9.ಗಣಿಗಾರಿಕೆಯೆಂದರೇನು?

ಉತ್ತರ : ಭೂಮಿಯಲ್ಲಿ ದೊರೆಯುವ ಕಬ್ಬಿಣದ ಅದಿರು, ಮ್ಯಾಂಗನೀಸ್, ಚಿನ್ನ, ವಜ್ರ, ಕಲ್ಲಿದ್ದಲು ಪೆಟ್ರೋಲಿಯಂ ಮೊದಲಾದ ಖನಿಜಗಳನ್ನು

ಹೊರತೆಗೆಯುವುದನ್ನು ಗಣಿಗಾರಿಕೆಯೆಂದು ಕರೆಯುವರು.

10. ತೃತೀಯ ಆರ್ಥಿಕ ಉದ್ಯೋಗಗಳೆಂದರೇನು?

 ಉತ್ತರ :ಈ ವೃತ್ತಿಗಳು ಪ್ರಾಥಮಿಕ ಹಾಗೂ ದ್ವಿತೀಯ ವೃತ್ತಿಗಳಿಗೆ ಪೂರಕವಾಗಿರುತ್ತಿವೆ. ಇವುಗಳು ಎಲ್ಲಾ ಬಗೆಯ ಸೇವೆಗಳು, ಚಿಲ್ಲರೆ

ವ್ಯಾಪಾರ, ಬ್ಯಾಂಕಿಂಗ್‌, ಮನರಂಜನೆ ವಿದ್ಯಾಭ್ಯಾಸ, ಆರೋಗ್ಯ ಸಾರಿಗೆ ಮತ್ತು ಸಂಪರ್ಕವನ್ನು ಒಳಗೊಂಡಿರುತ್ತವೆ.

ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿ:-

11. ದ್ವಿತೀಯ ಮತ್ತು ತೃತೀಯ ಆರ್ಥಿಕ ವ್ಯಕ್ತಿಗಳಿಗಿರುವ ವ್ಯತ್ಯಾಸಗಳೇನು?

ಉತ್ತರ:

12. ಗಣಿಗಾರಿಕೆಯ ವಿಧಗಳಾವುವು?

ಉತ್ತರ:

ಗಣಿಗಾರಿಕೆಯು ನಿರ್ವಹಿಸಲ್ಪಡುವ ಮುಖ್ಯ ವಿಧಾನಗಳೆಂದರೆ

1. ತೆರೆದ ಗಣಿ ವಿಧಾನ

2.ಆಂತರಿಕ ವಿಧಾನ

3. ಸುರಂಗ ವಿಧಾನ

13. ದ್ವಿತೀಯ ಉದ್ಯೋಗಗಳ ಪ್ರಾಮುಖ್ಯತೆಯನ್ನು ವಿವರಿಸಿ

ಉತ್ತರ:

• ಕೈಗಾರಿಕೆಗಳು ಹೆಚ್ಚು ಪ್ರಮಾಣದ ರಾಷ್ಟ್ರೀಯ ಆದಾಯ ಮತ್ತು ವಿದೇಶೀ ವಿನಿಮಯವನ್ನು ನೀಡುತ್ತವೆ.

• ಇವುಗಳು ಹೆಚ್ಚು ಉದ್ಯೋಗವನ್ನು ನೀಡುತ್ತವೆ.

• ಇವುಗಳು ವ್ಯವಸಾಯ ಕ್ಷೇತ್ರಕ್ಕೆ ಅಗತ್ಯವಾದ ಟ್ರಾಕ್ಟರು ರಾಸಾಯನಿಕ ಗೊಬ್ಬರ,ತಂತ್ರಜ್ಞಾನ ಮೊದಲಾದವುಗಳನ್ನು

ನೀಡಿ ಆಧುನೀಕರಣಗೊಳ್ಳಲು ಸಹಾಯವಾಗಿವೆ.

•ಕೈಗಾರಿಕೆಗಳಲ್ಲಿ

ಕಡಿಮೆಯಾಗುವುದು.

ಹೆಚ್ಚು ಜನರಿಗೆ ಉದ್ಯೋಗ

ದೊರಕುವುದರಿಂದ

ವ್ಯವಸಾಯ ಕ್ಷೇತ್ರದಲ್ಲಿ ಉದ್ಯೋಗದ

ಒತ್ತಡ ಕೈಗಾರಿಕಾ ವಲಯದಲ್ಲಿ ವಾಣಿಜ್ಯ ವಿದ್ಯಾಭ್ಯಾಸ ಸಾರಿಗೆ ಮತ್ತು ಸಂಪರ್ಕ, ಬ್ಯಾಂಕಿಂಗ್ ಮೊದಲಾದವು ಅಭಿವೃದ್ಧಿಯನ್ನು

ಹೊಂದುತ್ತವೆ.

14. ಮೀನುಗಾರಿಕೆಯ ವಿಧಗಳಾವುವು?

ಉತ್ತರ :ಮೀನುಗಾರಿಕೆಯ ವಿಧಗಳು: ಮೀನುಗಾರಿಕೆಯನ್ನು ನಿರ್ವಹಿಸುವ ಸ್ಥಳಗಳ ಆಧಾರದಿಂದ ಇದನ್ನು ಮೂರು ವಿಧಗಳಾಗಿ

ಪಿಂಗಡಿಸಬಹುದು.

1.ಸಿಹಿನೀರಿನ ಮೀನುಗಾರಿಕೆ

2.ತೀರಪ್ರದೇಶದ ಮೀನುಗಾರಿಕೆ

3.ತೆರೆದ ಸಮುದ್ರದ ಮೀನುಗಾರಿಕೆ

15. ಮರಕಡಿಯುವ ಉದ್ಯಮವು ಸಮಶೀತೋಷ್ಣವಲಯದಲ್ಲಿ ಏಕೆ ಹೆಚ್ಚು ಅಭಿವೃದ್ಧಿಯಾಗಿದೆ?

ಉತ್ತರ: ಸಮಶೀತೋಷ್ಣವಲಯದಲ್ಲಿ ಮರಕಡಿಯುವ ಉದ್ಯಮವು ಹೆಚ್ಚು ಅಭಿವೃದ್ಧಿ ಹೊಂದಿದೆ. ಇದಕ್ಕೆ ಕಾರಣವೆಂದರೆ

ಇದನ್ನು ಓದಿ :-ಭಾರತ ಇತಿಹಾಸದ ಪ್ರಮುಖವಾದ ಪ್ರಶ್ನೆ ಮತ್ತು ಉತ್ತರಗಳು 

ವಿಸ್ತಾರವಾದ ಪ್ರದೇಶಗಳಲ್ಲಿ ಒಂದೇ ಜಾತಿಯ ಮರಗಳು ಬೆಳೆಯುವುದು.

ಮರವನ್ನು ಮರದತಿರಳು, ಕಾಗದ ಹಾಗೂ ಹಡಗು ನಿರ್ಮಾಣಗಳಿಗೆ ಬಳಕೆ ಮಾಡುವುದು.

ಆಧುನಿಕ ತಂತ್ರಜ್ಞಾನವು ಮರಗಳನ್ನು ಸುಲಭವಾಗಿ ಕಡಿಯಲು ನೆರವಾಗಿದೆ.

ಉತ್ತಮವಾದ ಸಾರಿಗೆ ಸೌಲಭ್ಯಗಳು ಅಭಿವೃದ್ಧಿ ಹೊಂದಿವೆ.

ಅರಣ್ಯ ಉತ್ಪನ್ನಗಳಿಗೆ ಸಮೀಪದಲ್ಲಿಯೇ ಕೈಗಾರಿಕೆಗಳಿದ್ದು, ಇವುಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಲು ಹಾಗೂ ರಫ್ತು

ಮಾಡಲು ಸಹಾಯಕವಾಗಿದೆ.

16. ಆಹಾರಸಂಗ್ರಹಣೆಯ ವೃತ್ತಿಯನ್ನು ಕುರಿತು ಸಂಕ್ಷಿಪ್ತವಾಗಿ ವಿವರಿಸಿ.

ಉತ್ತರ: ಪ್ರಪಂಚದ ಕೆಲವು ಭಾಗಗಳಲ್ಲಿ ಜನರು ಆಹಾರಕ್ಕಾಗಿ ನೇರವಾಗಿ ಪ್ರಕೃತಿಯನ್ನೇ ಅವಲಂಬಿಸಿದ್ದು ಅತ್ಯಂತ ಸರಳವಾದ ಬದುಕನ್ನು

ರೂಢಿಸಿಕೊಂಡಿರುವರು. ಪ್ರಕೃತಿಯಿಂದ ಮೂಲ ಅವಶ್ಯಕತೆಗಳಾದ ಆಹಾರ, ಉಡುಪು.ವಸತಿ ಮೊದಲಾದವುಗಳಿಗಾಗಿ ವಸ್ತುಗಳನ್ನು

ಸಂಗ್ರಹಿಸುವುದನ್ನು “ಸಂಗ್ರಹಣೆ” ಎನ್ನುವರು. ಇದು ಮನುಷ್ಯನ ಅತ್ಯಂತ ಪುರಾತನವಾದ ಆರ್ಥಿಕ ವೃತ್ತಿಯಾಗಿದೆ. ಇಂದಿಗೂ

ಪ್ರಪಂಚದ ಕೆಲವು ಬುಡಕಟ್ಟು ಜನರು ತಮ್ಮ ದೈನಂದಿನ ಆಹಾರಕ್ಕಾಗಿ ಅರಣ್ಯ ಅಥವಾ ಪ್ರಕೃತಿಯಿಂದ ಹಣ್ಣುಗೆಡ್ಡೆ

ಗೆಣಸು,ಕಾಯಿ,ಎಲೆ; ಉಡುಪಿಗಾಗಿ ತೊಗಟೆ, ಎಲೆ ಹಾಗೂ ಹುಲ್ಲು: ವಸತಿ ನಿರ್ಮಾಣಕ್ಕಾಗಿ ಮರದ ರೆಂಬೆ, ಬಿದಿರು.ಎಲೆ

ಮೊದಲಾದವುಗಳನ್ನು ಸಂಗ್ರಹಿಸಿಕೊಳ್ಳುವರು.

ಈ ಕೆಳಗಿನ ಪ್ರಶ್ನೆಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ:-

17. ಪ್ರಪಂಚದಲ್ಲಿ ಪ್ರಾಣಿಸಾಕಾಣಿಕೆಯನ್ನು ಕುರಿತು ವಿವರಿಸಿ

ಉತ್ತರ: ನಿರ್ದಿಷ್ಟ ಉಪಯೋಗಗಳಿಗಾಗಿ ಪ್ರಾಣಿಗಳನ್ನು ಸಾಕುವುದನ್ನು ಪ್ರಾಣಿ ಸಾಕಾಣಿಕೆಯೆನ್ನುವರು. ಪ್ರಪಂಚದ ವಿವಿಧ ಭಾಗಗಳಲ್ಲಿ ವಿವಿಧ

ಉದ್ದೇಶಗಳಿಗಾಗಿ ವಿವಿಧ ಬಗೆಯ ಪ್ರಾಣಿಗಳನ್ನು ಸಾಕಲಾಗುತ್ತಿದೆ. ಪ್ರಾಣಿಗಳಿಂದ ಪಡೆಯುತ್ತಿರುವ ಉತ್ಪನ್ನಗಳಲ್ಲಿ ಹಾಲು, ಮಾಂಸ,ಮೂಳೆ

ಚರ್ಮ ಕೂದಲು ಮತ್ತು ಉಣ್ಣೆ ಮುಖ್ಯವಾದವು.

ಪ್ರಾಣಿ ಸಾಗಾಣಿಕೆಯ ಪ್ರದೇಶಗಳು: ಪ್ರಾಣಿ ಸಾಕಾಣಿಕೆ ಸಾಂಪ್ರದಾಯಿಕ ಮಾದರಿ ಹಾಗೂ ಆಧುನಿಕ ಮಾದರಿ ಹೀಗೆ ಎರಡೂ ಹಂತಗಳಲ್ಲಿ

ನಿರ್ವಹಿಸಲ್ಪಡುತ್ತಿದೆ. ಸಾಂಪ್ರದಾಯಿಕ ಮಾದರಿಯಲ್ಲಿ ಬುಡಕಟ್ಟು ಜನರು ಜೀವನೋಪಾಯಕ್ಕಾಗಿ ಪಾಣಿ ಸಾಕಾಣಿಕೆಯನ್ನು

ರೂಢಿಸಿಕೊಂಡಿದ್ದು, ಇವರು ಒಂದು ಸ್ಥಳದಿಂದ ಮತ್ತೊಂದಕ್ಕೆ ನಿರಂತರವಾಗಿ ವಲಸೆ ಹೋಗುವರು. ಪ್ರತಿಯೊಂದು ಬುಡಕಟ್ಟು

ನಿರ್ದಿಷ್ಟ ಪ್ರದೇಶದಲ್ಲಿ ಜೀವಿಸುತ್ತಿರುವರು. ಉಷ್ಣವಲಯದ ಹುಲ್ಲುಗಾವಲುಗಳಲ್ಲಿ ನೈಜೀರಿಯಾದ ಫುಲಾನಿ ಹಾಗೂ ಪೂರ್ವ ಆಫ್ರಿಕಾದ

ಮಸಾಯಿ ಜನರು ದನಗಳ ಸಾಕಾಣಿಕೆಯಲ್ಲಿ ತೊಡಗಿರುವರು. ಸಹರಾದ ಬುಡಕಟ್ಟು ಜನರಲ್ಲಿ ಬಿಡೋಯಿನ್ ಅತಿ ಮುಖ್ಯರಾದವರು.

ದನ ಹಾಗೂ ಮೇಕೆಗಳನ್ನು ಸಾಕುವ ಈ ಜನರು ನಿರಂತರವಾಗಿ ವಲಸೆ ಹೋಗುವರು. ಮಧ್ಯ ಏಷ್ಯಾದಲ್ಲಿ ಕಿರ್ಗಿಸ್ ಜನರು ಹಿಂದೆ

ಅಪಾರ ಸಂಖ್ಯೆಯಲ್ಲಿ ಪ್ರಾಣಿಗಳನ್ನು ಸಾಕುತ್ತಿರುದ್ದರು. ಇಂದು ಈ ಜನರು ಒಂದೆಡೆ ನೆಲೆನಿಂತು ಜೀವಿಸುತ್ತಿರುವರು.

ವಾಣಿಜ್ಯ ಮಾದರಿಯ ಪ್ರಾಣಿ ಸಾಕಾಣಿಕೆ ವೈಜ್ಞಾನಿಕ ರೀತಿ ನೀತಿಗಳನ್ನು ಅಳವಡಿಸಿಕೊಂಡು ವಾಣಿಜ್ಯ ಮಾದರಿ ಯಲ್ಲಿ ಪ್ರಾಣಿಸಾಕಾಣಿಕೆಯನ್ನು ನಿರ್ವಹಿಸುತ್ತಿರುವರು. ವಾಣಿಜ್ಯ ಮಾದರಿ ಪಶುಸಂಗೋಪನೆಗೆ ಸ್ಥಳಾಂತರತೆಯ ಅಗತ್ಯವಿಲ್ಲ. ಇದನ್ನು

ಸಮಶೀತೋಷ್ಣವಲಯದ ಹುಲ್ಲುಗಾವಲಿನಲ್ಲಿ ವ್ಯಾಪಕವಾಗಿ ರೂಢಿಸಲ್ಪಟ್ಟಿದೆ. ಉತ್ತರ ಅಮೆರಿಕಾದ ಸೈ, ದಕ್ಷಿಣ ಅಮೆರಿಕಾದ

ಪಂಪಾಸ್,ಏಷ್ಯಾದ ಸ್ಟೆಪ್ಪಿ, ಆಸ್ಟ್ರೇಲಿಯಾದ ಡೆನ್ಸ್ ಇವುಗಳಲ್ಲಿ ಮುಖ್ಯವಾದವು. ಆಮೆರಿಕಾ ಸಂಯುಕ್ತಸಂಸ್ಥಾನ ಮತ್ತು

ಅರ್ಜಂಟೈನಾಗಳಲ್ಲಿ ಮಾಂಸದ ದನಗಳನ್ನು ಹೆಚ್ಚಾಗಿ ಸಾಕುವರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳಲ್ಲಿ ಉಣ್ಣೆ ಮತ್ತು

ಮಾಂಸಕ್ಕಾಗಿ ಕುರಿಗಳನ್ನು ವಾಣಿಜ್ಯ ಮಾದರಿಯಲ್ಲಿ ಸಾಕಲಾಗುತ್ತಿದೆ.

18, ಸ್ವಮಯವನ್ನು ಹರಿಚು ವಿವರಿಸಿ

ಉತ್ತರ: ಮಣ್ಣನ್ನು ಉಳುಮೆ ಮಾಡಿ ಬೆಳೆಗಳನ್ನು ಬೆಳೆಯುವ ಕಲೆಯನ್ನು “ವ್ಯವಸಾಯವೆಂದು ಕರೆಯುತ್ತಾರೆ. ಇಂದಿಗೂ ಪ್ರಪಂಚದ

ಹಲವಾರು ಪ್ರದೇಶಗಳಲ್ಲಿ ಸುರಾತನ ಮಾದರಿಯ ಆತ ಹಿಂದುಳಿದ ವ್ಯವಸಾಯ ಪದ್ಧತಿಗಳು ಕಂಡುಬರುತ್ತವೆ, ಉದಾಹರಣೆ ಸ್ಥಳಾಂತರ

ಬೇಸಾಯ (Shifting Cultivation), ಈ ವಿಧಾನದಲ್ಲಿ ಅರಣ್ಯಗಳ ಯಾವುದಾದರೊಂದು ಭಾಗದಲ್ಲಿ ಮರಗಳನ್ನು ಕಡಿದು,

ಅಥವಾ ಗಿಡಗಂಟಿಗಳನ್ನು ಬೆಂಕಿಯಿಂದ ಸುಟ್ಟು ಆ ಭಾಗಗಳಲ್ಲಿ ಸಾಂಪ್ರದಾಯಿಕ ವಿಧಾನದಿಂದ ಬೆಳೆಗಳನ್ನು ಬೆಳೆಯುವರು. ಫಸಲು

ಪಡೆದುಕೊಂಡ ನಂತರ ಈ ಜನರು ಇತರ ಬೇಟೆ, ಸಂಗ್ರಹಣೆ ಮೊದಲಾದ ವೃತ್ತಿಗಳನ್ನು ಅವಲಂಬಿಸಿ ವಲಸೆ ಹೋಗುವರು. ಮರುವರ್ಷ

ಮತ್ತೊಂದು ಕಡೆಯಲ್ಲಿ ಅರಣ್ಯಗಳನ್ನು ಕಡಿದು ವ್ಯವಸಾಯ ಆರಂಭಿಸುವರು. ಈಶಾನ್ಯ ಭಾರತದ ರಾಜ್ಯಗಳಲ್ಲಿ ಈ ಬೇಸಾಯವನ್ನು

'ಜೂಮಿಂಗ್' (Jhuming) ಎಂದೂ ಸಹ ಕರೆಯುವರು. ಈ ರೀತಿಯ ಸ್ಥಳಾಂತರ ಬೇಸಾಯಕ್ಕೆ ಬದಲು ಇತರ ಭಾಗಗಳಲ್ಲಿ ಜನರು

ಒಂದೇ ಕಡೆ ಬೆಳೆಸಿ ವ್ಯವಸಾಯವನ್ನು ನಿರ್ವಹಿಸುವರು. ಇದೇ

ನೆಲೆನಿಂತ ಜೇಸಾಯಿ (Sedentary Farming) ಆದರೆ ವ್ಯವಸಾಯವು ಹಿಂದುಳಿದ ಮಾದರಿಯದು, ಪ್ರಾಣಿಗಳನ್ನು ಭೂಮಿಯನ್ನು

ಉಳಲು

ಹಾಗೂ ಇತರ ಕಾರ್ಯಗಳಿಗೆ ಬಳಸುವರು, ಪ್ರಪಂಚದ ಕೆಲವು ಭಾಗಗಳಲ್ಲಿ ವ್ಯವಸಾಯವು ವಾಣಿಜ್ಯ ಮಾದರಿಯಲ್ಲಿರುದ್ಧದ, ಇದಕ್ಕಾಗಿ

ಆಧುನಿಕ ಸಾಲ ಶ್ರೀ ಕಾಯನ್ನು ಬಳಸಲಾಗುತ್ತಿದೆ. ಕಲವು ಪ್ರದೇಶಗಳಲ್ಲಿ ಅತ್ಯಧಿಕ ಪ್ರಮಾಣದ ಬಂಡವಾಳದ ಹೂಡಿಕಯೊಡಗ

ತೋಟಗಾರಿಕೆ ಬೇಸಾಯವನ್ನು ಅಭಿವೃದ್ಧಿಪಡಿಸಲಾಗಿದೆ.

ಭಾರತ, ಬಾಂಗ್ಲಾ, ಭೂತಾನ್ ಮೊದಲಾದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನರು ವ್ಯವಸಾಯವನ್ನೇ ಅವಲಂಬಿಸಿರುವರು. ಇದಕ್ಕೆ

ಬದಲಾಗಿ ಅಭಿವೃದ್ಧಿಹೊಂದಿದ ರಾಷ್ಟ್ರಗಳಲ್ಲಿ ವ್ಯವಸಾಯವು ಆಕರ್ಷಕ ವೃತ್ತಿಯಾಗಿ ಉಳಿದಿಲ್ಲ. ಇದರಿಂದಾಗಿ ಈ ರಾಷ್ಟ್ರಗಳಲ್ಲಿ

ವ್ಯವಸಾಯವನ್ನು ಅವಲಂಬಿಸಿರುವ ಜನರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ. ಬ್ರಿಟನ್ನಿನಲ್ಲಿ ಶೇ 4 ರಷ್ಟು ವ್ಯವಸಾಯವನ್ನು

ಅವಲಂಬಿಸಿದ್ದಾರೆ ಭಾರತದಲ್ಲಿ ಇದು ಶೇ. 60 ಹಾಗೂ ಕೀನ್ಯಾದಲ್ಲಿ ಇದು ಶೇ 4 ರಷ್ಟಿರುವುದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವ್ಯವಸಾಯವು ಯಾಂತ್ರೀಕೃತವಾಗಿದೆ.

19. ಗಣಿಗಾರಿಕೆಯೆಂದರೇನು? ಅದರ ವಿಧಗಳು, ಅನುಕೂಲ ಹಾಗೂ ಅನಾನುಕೂಲತೆಗಳನ್ನು ವಿವರಿಸಿ

ಉತ್ತರ:

ಭೂಮಿಯಲ್ಲಿ ದೊರೆಯುವ ಕಬ್ಬಿಣದ ಅದಿರು, ಮ್ಯಾಂಗನೀಸ್, ಚಿನ್ನ, ವಜ್ರ, ಕಲ್ಲಿದ್ದಲು ಪೆಟ್ರೋಲಿಯಂ ಮೊದಲಾದ ಖನಿಜಗಳನ್ನು

ಹೊರತೆಗೆಯುವುದನ್ನು ಗಣಿಗಾರಿಕೆಯೆಂದು ಕರೆಯುವರು. ಮಾನವನ ನಾಗರೀಕತೆಯ ಆರಂಭದ ಹಂತದಲ್ಲಿ ಈ ಖನಿಜಗಳ ಪಾತ್ರ

ಅತ್ಯಂತ ಪ್ರಮುಖವಾಗಿವೆ.

ಗಣಿಗಾರಿಕೆಯ ಮುಖ್ಯ ವಿಧಾನಗಳು: ಗಣಿಗಾರಿಕೆಯು ನಿರ್ವಹಿಸಲ್ಪಡುವ ಮುಖ್ಯ ವಿಧಾನಗಳೆಂದರೆ

1. ತೆರೆದ ಗಣಿ ವಿಧಾನ : ಇದು ಅತ್ಯಂತ ಸರಳವಾದುದು ಇದರಲ್ಲಿ ಖನಿಜನಿಕ್ಷೇಪದ ಮೇಲಿರುವ ಮಣ್ಣಿನ ಪದರವನ್ನು ತೆಗೆದುಹಾಕಿ

ಅನಂತರ ಅಲ್ಲಿರುವ ಖನಿಜನಿಕ್ಷೇಪವನ್ನು ತೆಗೆಯಲಾಗುವುದು. ಉದಾ: ಕಲ್ಲಿದ್ದಲು, ಕಬ್ಬಿಣದ ಅದಿರು ಇತ್ಯಾದಿ.

1. ಆಂತರಿಕ ಗಣಿಗಾರಿಕೆ: ಈ ವಿಧಾನವನ್ನು ಭೂಮೇಲೈನಿಂದ ಆಳದಲ್ಲಿರುವ ಬೀಜಗಳನ್ನು ಹೊರತೆಗೆದು ಬಳಸುವರು. ಉದಾ

ಕಲ್ಲಿದ್ದಲು, ಸೀಸ, ಬಿಣದ ಅದಿರು.

3, ಸುರಂಗ ವಿಧಾನ : ಈ ವಿಧಾನದಿಂದ ಆತಿಹೆಚ್ಚು ಆಳದಲ್ಲಿರುವ ಖನಿಜಗಳನ್ನು ಉತ್ಪಾದಿಸುವರು ಉದಾ: ಪೆಟ್ರೋಲಿಯಂ

ಸ್ವಾಭಾವಿಕ ಅನಿಲ ಇತ್ಯಾದಿ.

ಅನಾನುಕೂಲತೆಗಳು: ಗಣಿಗಾರಿಕೆಯು ಹಲವಾರು ಸಮಸ್ಯೆಗಳಿಗೆ ಕಾರಣವಾಗುವುದು. ವುಗಳೆಂದರೆ:

• ಗಣಿಗಾರಿಕೆಯಿಂದ ಪರಿಸರವು ಹಾಳಾಗುವುದು, ಉದಾ: ಕರ್ನಾಟಕದ ಬಳ್ಳಾರಿಯಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆಯಿಂದ ಪರಿಸರವು ಅತ್ಯಂತ

ಸಂಷ್ಟ ಪ್ರಮಾಣದಲ್ಲಿ ಹಾಳಾಗಿದೆ.

ಖನಿಜಗಳು ಮುಗಿದುಗುವ ಸಂಪನ್ಮೂಲಗಳು, ಇವುಗಳು ಉತ್ಪಾದಿಸಿದಂತೆ ಭೂಮಿಯಲ್ಲಿ ಅವುಗಳ ಪ್ರಮಾಣಕಡಿಮೆಯಾಗುವುದು.

• ಗಣಿಗಾರಿಕೆಯಿಂದ ಜಲಸಂಪನ್ಮೂಲಗಳು ಮಲಿನಗೊಂಡು ಹಾಳಾಗುತ್ತವೆ.

210, ಮೀನುಗಾರಿಕೆಯನ್ನು ಕುರಿತು ವಿಪರಿಸಿ

ಉತ್ತರ:

ಮೀನುಗಾರಿಕೆ ಇದು ಮನುಷ್ಯನ ಅತ್ಯಂತ ಪುರಾತನವಾದ ಉದ್ಯೋಗವಾಗಿದೆ. ಮೀನು,ಏಡಿ.ಶಾರ್ಕ್.ಟಿಪ್ಪು ಜೀವಿ ಮೊದಲಾದ ಎಲ್ಲಾ

ಬಗೆಯ ಜಲಚರಗಳ ಸಂಗ್ರಹಣೆಯನ್ನು ಒಳಗೊಂಡಿದೆ.

ಮೀನುಗಾರಿಕೆಯ ವಿಧಗಳು: ಮೀನುಗಾರಿಕೆಯನ್ನು ನಿರ್ವಹಿಸುವ ಸ್ಥಳಗಳ ಆಧಾರದಿಂದ ಇದನ್ನು ಮೂರು ವಿಧಗಳಾಗಿ

ವಿಂಗಡಿಸಬಹುದು.

1. ಸಿಹಿನೀರಿನ ಮೀನುಗಾರಿಕೆ: ಇದು ಒಳನಾಡಿನ ಸಿಹಿನೀರಿನ ಭಾಗಗಳಾದ ಕೊಳ,ಕೆರೆ, ನದಿ ಸರೋವರ ಮೊದಲಾದವುಗಳಲ್ಲಿ

ಕಂಡುಬರುವುದು.

2. ತೀರ ಪ್ರದೇಶದ ಮೀನುಗಾರಿಕೆ : ಇದು ಸಮುದ್ರ, ಸಾಗರದ ತೀರಗಳಲ್ಲಿ ನಿರ್ವಹಿಸಲ್ಪಡುವ ಮೀನುಗಾರಿಕೆಯಾಗಿದೆ.

3. ತೆರೆದ ಸಮುದ್ರದ ಮೀನುಗಾರಿಕೆ : ಇದು ಆಳಸಾಗರದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರ್ವಹಿಸಲ್ಪಡುವ ಮೀನುಗಾರಿಕೆ

ಪ್ರಪಂಚದ ವಿವಿಧ ಭಾಗಗಳಲ್ಲಿ ಮೀನುಗಳನ್ನು ವಿವಿಧ ರೀತಿಯಲ್ಲಿ ಹಿಡಿಯುವರು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕವಾದ

ಬಿಲ್ಲು-ಬಾಣ, ಬರಿಕೈ, ಸಣ್ಣಬಲೆ ಮತ್ತು ಸಣ್ಣ ದೋಣಿ ಮೊದಲಾದವುಗಳನ್ನು ಬಳಸುವರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ

ಆಧುನಿಕ ವಿಧಾನಗಳು ಬಳಕೆಯಲ್ಲಿವೆ. ಅತಿದೊಡ್ಡ ಹಡಗುಗಳು ವಿಶಾಲವಾದ ತೆರೆದ ಸಾಗರ-ಸಮುದ್ರಗಳಲ್ಲಿ ಹೆಚ್ಚು ವೇಳೆ

ನಿರಂತರವಾಗಿ ಮೀನುಗಾರಿಕೆಯಲ್ಲಿ ತೊಡಗಿರುತ್ತವೆ. ಇವುಗಳು ತೇಲುವ ಕೈಗಾರಿಕೆಯಂತಿದ್ದು ಮೀನನ್ನು ಹಿಡಿಯುವುದರಿಂದ,

ಪ್ಯಾಕಿಂಗ್ ಮಾಡುವವರೆಗಿನ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತವೆ. ವಾಣಿಜ್ಯ ಮಾದರಿಯ ಮೀನುಗಾರಿಕೆ ಜಪಾನ್, ಅ.ಸಂ.ಸಂ.ಸ್ಥಾನ

ಬಾಲ್ಟಿಕ್ ರಾಷ್ಟ್ರಗಳು, ಬ್ರಿಟನ್ ನಾರ್ವೆ ಮೊದಲಾದ ದೇಶಗಳಲ್ಲಿ ಕಂಡುಬರುವುದು.

ಇದನ್ನು ಓದಿ :-

21. ದ್ವಿತೀಯ ಆರ್ಥಿಕ ಉದ್ಯೋಗಗಳನ್ನು ಕುರಿತು ವಿವರಿಸಿ.

ಉತ್ತರ: ಪ್ರಾಕೃತಿಕವಾಗಿ ಉತ್ಪಾದಿಸಲ್ಪಡುವ ವಸ್ತುಗಳನ್ನು ಮನುಷ್ಯನಿಗೆ ಹೆಚ್ಚು ಉಪಯೋಗವಾಗುವಂತೆ ಪರಿವರ್ತಿಸುವ ಪ್ರಕ್ರಿಯೆಯನ್ನು

ಕೈಗಾರಿಕೆಯೆಂದು ಕರೆಯುವರು. ಇವುಗಳು ಕಚ್ಚಾವಸ್ತುಗಳನ್ನು ಹೆಚ್ಚು ಉಪಯುಕ್ತ ಹಾಗೂ ಮೌಲ್ಯವುಳ್ಳ ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವ

ಪ್ರಕ್ರಿಯೆಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ದ್ವಿತೀಯ ಆರ್ಥಿಕ ಉದ್ಯೋಗಳೆಂದೂ ಸಹ ಕರೆಯುವರು.

ಒಂದು ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಕೈಗಾರಿಕೆಗಳು ನಿರ್ವಹಿಸುವ ಪಾತ್ರ ಮಹತ್ತರವಾದುದು. ಆರಂಭದಲ್ಲಿ ಕೈಗಾರಿಕೆಗಳು ಅತಿ

ಕಡಿಮೆ ಪ್ರಮಾಣದಲ್ಲಿದ್ದು ಗುಡಿಕೈಗಾರಿಕೆಗಳಾಗಿದ್ದವು. ಇಂದು ಇವು ಬೃಹತ್‌ ಪ್ರಮಾಣದಲ್ಲಿದ್ದು ಹೆಚ್ಚು ವ್ಯಾಪಕವಾಗಿವೆ. ಇವುಗಳು ಆಧುನಿಕ

ತಂತ್ರಜ್ಞಾನ, ಅಪಾರ ಬಂಡವಾಳ ಮತ್ತು ನುರಿತ ಕೆಲಸಗಾರರನ್ನು ಒಳಗೊಂಡಿವೆ. ಇವುಗಳು ಅಪಾರ ಉದ್ಯೋಗಾವಕಾಶಗಳನ್ನು

ನೀಡಿರುವುದಲ್ಲದೆ, ಜನರ ಜೀವನ ಮಟ್ಟವು ಉತ್ತಮಗೊಳ್ಳಲು ಸಹ ಕಾರಣವಾಗಿವೆ. ಅಲ್ಲದೆ ಕೈಗಾರಿಕೆಗಳು ವಿದೇಶೀ ವಿನಿಮಯಗಕೆಗೂ

ಸಹಾಯಕ, ಅಭಿವೃದ್ಧಿ ಹೊಂದಿದ ಪಶ್ಚಿಮ ಯುರೋಪಿನ ರಾಷ್ಟ್ರಗಳು, ರಷ್ಯಾ ಅಮೆರಿಕ ಸಂಯುಕ್ತ ಸಂಸ್ಥಾನ, ಜಪಾನ್ ಮೊದಲಾದ

ರಾಷ್ಟ್ರಗಳಲ್ಲಿ ಹೆಚ್ಚು ಜನರು ಪ್ರಾಥಮಿಕ ಆರ್ಥಿಕ ಉದ್ಯೋಗಳಿಗಿಂತ ದ್ವಿತೀಯ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವರು.



x

Previous Post Next Post