Free Laptop Scheme: ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ,ಬೇಗನೆ ಅರ್ಜಿ ಸಲ್ಲಿಸಿ ಮತ್ತು ಇಲ್ಲಿದೆ ಸಂಪೂರ್ಣ ಮಾಹಿತಿ

 Free Laptop Scheme: ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ,ಬೇಗನೆ ಅರ್ಜಿ ಸಲ್ಲಿಸಿ ಮತ್ತು ಇಲ್ಲಿದೆ  ಸಂಪೂರ್ಣ ಮಾಹಿತಿ

ನಮ್ಮ ಎಲ್ಲ ವಿದ್ಯಾರ್ಥಿ ಬಳಗಕ್ಕೆ ನಮ್ಮ ಸರಳ ಒನ್ ತಂಡದಿಂದ ಆತ್ಮೀಯ ಸ್ವಾಗತ  , ನಮ್ಮ ಸರಳ ಒನ್ ತಂಡವು ಪ್ರತಿಯೊಂದು ಬ್ಲಾಗ್ದಾಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನೂ ಪೋಸ್ಟ ಮಾಡುತ್ತೇವೆ ಅದಕ್ಕೆ ಎಲ್ಲರು ನಮ್ಮ ಸರಳ ಒನ್ ತಂಡದ ವಾಟ್ಸಪ್ಪ ಅಥವಾ ಟೆಲಿಗ್ರಾಮ್  ಚಾನೆಲ್ ಜಾಯಿನಿ ಆಗಿ ಮತ್ತಷ್ಟು ಮಾಹಿತಿ ಪಡೆಯಿರಿ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ನಮ್ಮ ಪರಿಶಿಷ್ಟ ಜಾತಿ ಸಫಾಯಿ ಕರ್ಮಚಾರಿಗಳ, ಪೌರ ಕಾರ್ಮಿಕರ ಹಾಗೂ  ಮ್ಯೂನಿಯಲ್ ಸ್ಕ್ಯಾವೆಂಜರ್‌ಗಳ ವಿದ್ಯಾರ್ಥಿಗಳಿಗೆ  ಒಂದು ಪ್ರಮುಖ ಯೋಜನೆಯನ್ನು (Free Laptop) ಆರಂಭಿಸಿದೆ. ಈ ಯೋಜನೆಯಡಿ ಉನ್ನತ ವ್ಯಾಸಂಗದಲ್ಲಿ  ತೊಡಗಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ.ಮತ್ತು ಈ  ಡಿಜಿಟಲ್ ಯುಗದಲ್ಲಿ ಶಿಕ್ಷಣದ ಗುಣಮಟ್ಟ ಮತ್ತು  ಪ್ರಗತಿ ಹೆಚ್ಚಿಸಲು ಲ್ಯಾಪ್‌ಟಾಪ್ ಅತ್ಯಗತ್ಯ ಸಾಧನವಾಗಿದೆ.ಹಾಗು ಆನ್‌ಲೈನ್ ಕ್ಲಾಸ್‌ಗಳು, ಸಂಶೋಧನೆ, ಪ್ರಾಕ್ಟಿಕಲ್‌ಗಳು, ಮತ್ತು ಅನೇಕ  ಪ್ರಾಜೆಕ್ಟ್ ಕೆಲಸಗಳಿಗೆ ಇದು ವಿದ್ಯಾಥಿಗಳಿಗೆ  ತುಂಬಾ ಸಹಾಯಕವಾಗಲಿದೆ


Free Laptop ಯೋಜನೆಯಲ್ಲಿ ಭಾಗಿಯಾಗಲು ಅರ್ಹತೆಗಳೇನಿರಬೇಕು?

ಈ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ  ಪ್ರಯೋಜನ ಪಡೆಯಲು, ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ತಂದೆ ಅಥವಾ ತಾಯಿ ಪರಿಶಿಷ್ಟ ಜಾತಿ ಅವರಾಗಿರಬೇಕು ಮತ್ತು  ಸಫಾಯಿ ಕರ್ಮಚಾರಿ,ಅಥವಾ  ಪೌರ ಕಾರ್ಮಿಕ ಆಗಿರಬೇಕು  ಅಥವಾ ಮ್ಯೂನಿಯಲ್ ಸ್ಕ್ಯಾವೆಂಜರ್ ಹಿರಿತನವಾಗಿ ಕನಿಷ್ಟ 5 ವರ್ಷಗಳಿಂದ ನಿರಂತರ ಸೇವೆಯಲ್ಲಿರಬೇಕು. ಮತ್ತು ಅರ್ಜಿ ಸಲ್ಲಿಸುವಂತಹ  ವಿದ್ಯಾರ್ಥಿಗಳು  B.Com, ಅಥವಾ B.Sc, BBM, MBBS, M.Com, MA, M.Sc, M.Tech, MBA ಹಾಗೂ ಮುಂತಾದ ಯಾವುದೇ ಶಿಕ್ಷಣ ಪದವಿ ಅಥವಾ ಸ್ನಾತಕೋತ್ತರ ಕೋರ್ಸ್‌ನಲ್ಲಿ ಪ್ರವೇಶ ಪಡೆದಿರಬೇಕು.

ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು?

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಉಚಿತ ಲ್ಯಾಪ್ಟಾಪ್ ಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು Free Laptop ಪಡೆದುಕೊಳ್ಳಲು ಡಿಸೆಂಬರ್ 6, 2025 ರ ಒಳಗೆ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿದೆ. 


ಅರ್ಜಿ ಸಲ್ಲಿಕೆ ವಿಳಾಸ

ಜಿಲ್ಲಾ ವ್ಯವಸ್ಥಾಪಕರು,
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ,
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ,
ನಂ. SA1, ಜಿಲ್ಲಾಡಳಿತ ಭವನ,
ಚಿಕ್ಕಬಳ್ಳಾಪುರ – 562101.
ಈ ಮೇಲೆ ಕೊಟ್ಟಿರುವ ವಿಳಾಸಕ್ಕೆ ಅರ್ಜಿಗಳನ್ನು ಖುದ್ದಾಗಿ ಆಫೀಸಗೆ ಹೋಗಿ ಕೊಡಬೇಕಾಗುತ್ತದೆ ಮತ್ತು ನಿಮ್ಮ ಅರ್ಜಿಗಳನ್ನು ಪರಿಶೀಲಿಸಿ ಆಮೇಲೆ ವಿತರಣೆ ಮಾಡಲಾಗುವುದು .

ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲಾತಿಗಳು

  • ಇತ್ತೀಚಿನ ಬಾವಚಿತ್ರ  (2 ಪ್ರತಿಗಳು)
  • ಪರಿಶಿಷ್ಟ ಜಾತಿ ಸಫಾಯಿ ಕರ್ಮಚಾರಿ  ಗುರುತಿನ ಚೀಟಿ
  • 5 ವರ್ಷಗಳ ಕನಿಷ್ಟ ಸೇವೆಯಲ್ಲಿರುವ  ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣ ಪತ್ರ 
  • ವಿದ್ಯಾಧನ, ತಂದೆ, ತಾಯಿ ಆದಾಯ ಪ್ರಮಾಣಪತ್ರಗಳು
  • ವಿದ್ಯಾರ್ಥಿ, ತಂದೆ, ತಾಯಿಯ ಆಧಾರ್ ಕಾರ್ಡ್ ಪ್ರತಿಗಳು
  • ಪ್ರಸ್ತುತ ಶಿಕ್ಷಣ ಸಂಸ್ಥೆಯ ದಾಖಲಾತಿ ಚೀಟಿ ಅಥವಾ ಫೀಸ್ ರಸೀದಿ
  • ಇತ್ತೀಚಿನ ಅಕಾಡೆಮಿಕ್ ಮಾರ್ಕ್ಸ್ ಕಾರ್ಡ್
  • ಕಾಲೇಜು/ವಿಶ್ವವಿದ್ಯಾಲಯದ ಗುರುತು ಪತ್ರ
  • ಶಿಕ್ಷಣ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣಪತ್ರ 

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಯೋಜನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಥವಾ  ಪೋಷಕರು ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ 08156-277026 ಈ ದೂರವಾಣಿ ಸಂಖ್ಯೆ ಕರೆ ಮಾಡಿ ತಿಳಿದುಕೊಳ್ಳಬಹುದು  ಅಥವಾdm_chikkaballapur8@yahoo.com ಗೆ ಇಮೇಲ್ ಕಳುಹಿಸಿ ಮಾಹಿತಿ ಪಡೆಯಬಹುದಾಗಿದೆ 

 

ಮತ್ತು ಸಮಾಜದಲ್ಲಿ  ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಯೋಜನೆ ಒಂದು ತರಹದ ಸಹಾಯ ನೀಡುತ್ತದೆ.ಮತ್ತು  ಶಿಕ್ಷಣದ ರಂಗದಲ್ಲಿ ಸಮಾನಾವಕಾಶಗಳನ್ನು ನಿರ್ಮಿಸುವ ಇದೊಂದು ಸಾಮಾಜಿಕ ನೇತೃತ್ವದ ಮಹತ್ವದ ಹೆಜ್ಜೆ. ಈ ಯೋಜನೆಯ ಗುರುಯಾಗಿದೆ  ಮತ್ತು ಡಿಜಿಟಲ್ ಸಾಧನಗಳಿಂದ ಶೈಕ್ಷಣಿಕ ಪ್ರಗತಿಯ ಹಾದಿಯನ್ನು ಸುಗಮಗೊಳಿಸುವ ಈ ಅವಕಾಶವು ಸಮಾಜದ ಮುಂದಿನ ತಲೆಮಾರಿಗೆ ದೊಡ್ಡ ಸ್ಪೂರ್ತಿಯಾಗಲಿದೆ.





 


WhatsApp Group Join Now
Telegram Group Join Now
ನವೀನ ಹಳೆಯದು