PDO Recruitment 2025: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಭರ್ತಿ 2025

 PDO Recruitment 2025: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಭರ್ತಿ 2025

PDO Recruitment 2025: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಭರ್ತಿ ೨೦೨೫ ರ  994 ಹುದ್ದೆಗಳ ಭರ್ತಿಗೆ ಆಹ್ವಾನ  ಮತ್ತು ಅದಕ್ಕೆ  ಅರ್ಹತೆ, ಜಿಲ್ಲಾವಾರು ಹುದ್ದೆಗಳು, ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರ ಈ ಕೆಳಗಿದೆ 

ಬೆಂಗಳೂರು : ಕರ್ನಾಟಕ  ಗ್ರಾಮ ಪಂಚಾಯತ್‌ಗಳಲ್ಲಿ ಮಹತ್ವದ ಹುದ್ದೆಯಾಗಿರುವ ನಮ್ಮ  ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ೨೦೨೫ ರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ದೊಡ್ಡ ಘೋಷಣೆ ಹೊರಹಾಕಿದೆ .  ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ಹುದ್ದೆಗಳು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಿವೆ.


ಕರ್ನಾಟಕ ರಾಜ್ಯದಲ್ಲಿ ಅನೇಕ ವರ್ಷಗಳಿಂದ ಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ್ಹು ದ್ದೆಗಳುಖಾಲಿಯಾಗಿರುವುದರಿಂದ ಪಂಚಾಯತ್ ಮಟ್ಟದಲ್ಲಿ ಯೋಜನೆಗಳ ಅನುಷ್ಠಾನ,ಮತ್ತು  ಆಡಳಿತಾತ್ಮಕ ಕಾರ್ಯಗಳು ಹಾಗೂ ಸಾರ್ವಜನಿಕ ಸೇವೆಗಳ ನಿರ್ವಹಣೆಯಲ್ಲಿ ಸ್ವಲ್ಪ  ಅಡಚಣೆ ಉಂಟಾಗುತ್ತಿತ್ತು. ಆದರಿಂದ ಕರ್ನಾಟಕ ಸರ್ಕಾರವು ಒಟ್ಟು 994  ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವಕಾರ್ಯ  ಕೈಗೊಂಡಿದೆ. ಇದು ನಿರುದ್ಯೋಗಿ ಯುವಕರಿಗೆ ಮತ್ತು ಈಗಾಗಲೇ ತಯಾರಿ ಮಾಡುತ್ತಿರುವ ಅಬ್ಯರ್ಥಿಗಳಿಗೆ   ದೊಡ್ಡ ಸುವರ್ಣ ಅವಕಾಶವಾಗಿದೆ ,ಮತ್ತು  ಕರ್ನಾಟಕದ ರಾಜ್ಯದ  ಅಭಿವೃದ್ಧಿಗೆ ಹೊಸ ಚೈತನ್ಯವನ್ನು ನೀಡಲಿದೆ. ಈ ಆಹ್ವಾನ ತರಲಿದೆ .

PDO Recruitment 2025: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಭರ್ತಿ 2025 ರ ಅಧಿಕೃತ ಮಾಹಿತಿ  

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಭರ್ತಿ 2025 ರ ಅಧಿಕೃತ  ಮಾಹಿತಿಯನ್ನು ಇದೆ  ಡಿಸೆಂಬರ್ 15, 2025 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಪ್ರಕಟಿಸಿಲಾಗಿದೆ

ಕರ್ನಾಟಕ ಲೋಕಸೇವಾ ಆಯೋಗ (KPSC)  ರ ಪ್ರಕಾರ 247 PDO ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸ್ಪಷ್ಟಪಡಿಸಿದರು. ವಿಧಾನ ಪರಿಷತ ಮಂಡಳಿದಲ್ಲಿ ಹೇಳಲಾಗಿದೆ ಇದರಲ್ಲಿ:

  • 150 ಹುದ್ದೆಗಳು ಸಾಮಾನ್ಯ ವೃಂದಕ್ಕೆ
  • 97 ಹುದ್ದೆಗಳು ಕಲ್ಯಾಣ ಕರ್ನಾಟಕ ವೃಂದಕ್ಕೆ
ಇನ್ನುಳಿದಂತೆ ಖಾಲಿ ಇರುವ 994 PDO ಹುದ್ದೆಗಳಿಗೂ ಶೀಘ್ರವೇ ಅಧಿಸೂಚನೆ ಹೊರಡಿಸಿ ನೇಮಕಾತಿ ಅಹ್ವಾನ ಮಾಡುತ್ತೇವೆ  ಎಂದು ಸಚಿವರು ಭರವಸೆ ನೀಡಿದ್ದಾರೆ.

PDO ಹುದ್ದೆಗಳ ಮಹತ್ವಗಳೇನು ?

  • ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO)  ಹುದ್ದೆ ಕೇವಲ ಸರ್ಕಾರಿ ಉದ್ಯೋಗವಲ್ಲ. ಇದು ಗ್ರಾಮೀಣ ಅಭಿವೃದ್ಧಿಗೆ ನೇರವಾಗಿ ಜವಾಬ್ದಾರಿಯುತ ಪ್ರಮುಖ ಸ್ಥಾನವಾಗಿದೆ.
  •  PDOಗಳ ಪ್ರಮುಖ ಕರ್ತವ್ಯಗಳು ಈ ಕೆಳಗಿನಂತಿವೆ  
  • ಗ್ರಾಮ ಪಂಚಾಯತ್ ಆಡಳಿತ ಸಂಪೂರ್ಣ ನಿರ್ವಹಣೆ
  • ಸರ್ಕಾರದ ಕೇಂದ್ರ ಮತ್ತು ರಾಜ್ಯ ಯೋಜನೆಗಳ ಜಾರಿ ಮಾಡುವುದು 
  • ಗ್ರಾಮೀಣ ಉದ್ಯೋಗ ಖಾತರಿ ಯೋಜನೆ  ಕಾರ್ಯಗಳನ್ನು (MGNREGA) ಅನುಷ್ಠಾನ  ಮಾಡುವುದು 
  • ಗ್ರಾಮಸಭೆ ಮತ್ತು ಪಂಚಾಯತ್ ಸಭೆಗಳ ಆಯೋಜನೆ ಮಾಡುವುದು 
  • ಹಣಕಾಸು ವ್ಯವಹಾರಗಳ ಮೇಲ್ವಿಚಾರಣೆ ಮಾಡುವುದು 
  • ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಮತ್ತು ಅನುಷ್ಠಾನ ಮಾಡುವುದು 

PDO Recruitment 2025 – ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿವೆ 

 ಜಿಲ್ಲೆಗಳು 

  ಖಾಲಿ ಹುದ್ದೆಗಳು 

 ಉತ್ತರ ಕನ್ನಡ

75 

 ದಾವಣಗೆರೆ

72 

 ಕಲಬುರಗಿ 

 68

 ಬೆಂಗಳೂರು ನಗರ

 67

 ವಿಜಯಪುರ    

 60

 ಚಿಕ್ಕಮಗಳೂರು

 55

 ಹಾವೇರಿ

 53

 ತುಮಕೂರು

 49

 ಹಾಸನ

 48

 ವಿಜಯನಗರ

 47

 ರಾಯಚೂರು

 45

 ಕೋಲಾರ

 43

 ಬೀದರ್ 

 40

 ಮಂಡ್ಯ

 33

 ಕೊಪ್ಪಳ

 30

 ಬೆಂಗಳೂರು ಗ್ರಾಮಾಂತರ

 29

 ಚಿಕ್ಕಬಳ್ಳಾಪುರ

 28

 ಉಡುಪಿ

 26

 ಚಾಮರಾಜನಗರ

 26

 ಧಾರವಾಡ

 18

 ಯಾದಗಿರಿ

 18

 ಚಿತ್ರದುರ್ಗ

 13

 ಕೊಡಗು

 10

 ಗದಗ

 9

 ಬಾಗಲಕೋಟೆ

 1


ಅರ್ಹತಾ ಮಾನದಂಡಗಳು

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಪೂರೈಸಿರಬೇಕು

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಶೈಕ್ಷಣಿಕ ಅರ್ಹತೆ

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಶೈಕ್ಷಣಿಕ ಅರ್ಹತೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು 

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಭಾಷಾ ಅರ್ಹತೆ

  • ಕನ್ನಡ ಭಾಷೆಯ ಜ್ಞಾನ ಕಡ್ಡಾಯ
  • ಕನ್ನಡ ಭಾಷಾ ಪರೀಕ್ಷೆಯನ್ನು ಉತ್ತೀರ್ಣರಾಗಿರಬೇಕು

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ವಯೋಮಿತಿ

  • ಸಾಮಾನ್ಯ ವರ್ಗದವರಿಗೆಕನಿಷ್ಠ 18 ರಿಂದ 35 ವರ್ಷ ದಲ್ಲಿರಬೇಕು 
  • SC / ST / OBC ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯಸ್ಸಿನ  ಸಡಿಲಿಕೆ ಅನ್ವಯವಾಗುತ್ತದೆ

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ
  • ಕನ್ನಡ ಭಾಷಾ ಪರೀಕ್ಷೆ
  • ದಾಖಲೆ ಪರಿಶೀಲನೆ

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಲಿಖಿತ ಪರೀಕ್ಷೆಯಲ್ಲಿ ಕೇಳಲಾಗುವ ವಿಷಯಗಳು

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಲಿಖಿತ ಪರೀಕ್ಷೆಯಲ್ಲಿ ಕೇಳಲಾಗುವ ವಿಷಯಗಳು ಈ ಕೆಳಗಿನಂತಿವೆ 
  1. ಸಾಮಾನ್ಯ ಜ್ಞಾನ
  2. ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿ
  3. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ
  4. ಭಾರತೀಯ ಸಂವಿಧಾನ
  5. ಪರಿಸರ, ಕೃಷಿ ಮತ್ತು ಸಮಾಜಶಾಸ್ತ್ರ
  6. ಪ್ರಸ್ತುತ ಘಟನೆಗಳು
ಈ ಎಲ್ಲ ವಿಷಯಗಳ ಬಗ್ಗೆ ಹೆಚ್ಚಿನ ಗಮನವಿರಬೇಕು 

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ PDO Recruitment ಅಧಿಸೂಚನೆ ಯಾವಾಗ

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ  ಅಧಿಸೂಚನೆ ಇನ್ನು ಪ್ರಕಟಿಸಿಲ್ಲ ಹೆಚ್ಚಿನ ಮಾಹಿತಿಗಾಗಿ ನೀವು ಸರ್ಕಾರದ KPSC ಅಥವಾ ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ನಿಯಮಿತವಾಗಿ ಪರಿಶೀಲಿಸುವುದು ಉತ್ತಮ 
  • kpsc.kar.nic.in
  • rdpr.karnataka.gov.in
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ (PDO Recruitment 2025)  ಕೇವಲ ಒಂದು ಉದ್ಯೋಗ ನೇಮಕಾತಿಯಲ್ಲ, ಇದು ಗ್ರಾಮೀಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಮಹತ್ವದ ನೇಮಖತಿಯಾಗಿದೆ ಮತ್ತು ಇದರಲ್ಲಿ  994 ಹೊಸ PDO ಹುದ್ದೆಗಳ ಭರ್ತಿ ಮಾಡುತ್ತಿದ್ದು  ಅದರಿಂದ ತಾವುಗಳು ಹೆಚ್ಚಿನ ಶ್ರಮ ಪಟ್ಟು ತಯಾರಿ ಮಾಡಿ ಮತ್ತು ಹುದ್ದೆ ನಿಮ್ಮದಾಗಿಸಿಕೊಳ್ಳಿ 

ಗೆಳೆಯರೇ  ಇದೆ ತರಹದ ಪ್ರಚಲಿತ ಮಾಹಿತಿ ಮತ್ತು ಮುಂತಾದ  ನೋಟ್ಸ್ ಹಾಗು ಇನ್ನಿತರ ಪಿಡಿಎಫ್ ಫೈಲ್ ಹಾಗೂ ನೇಮಖಾತಿಗಳ ಅಥವಾ ನೇರ ನೇಮಖತಿಗಳ ಬಗ್ಗೆ ಮಾಹಿತಿ ಹಾಗು  ಇನ್ನಿತರ ಅಪ್ಡೇಟ್ಸ್ ಸಲುವಾಗಿ ನೀವುಗಳು  ನಮ್ಮ ಸರಳ ಒನ್ ತಂಡದ  ವಾಟ್ಸಾಪ್   ಚಾನೆಲ್ ಗೆ ಜಾಯಿನ ಆಗಿ ಮತ್ತು ಎಲ್ಲ ತರಹದ ಮಾಹಿತಿ ಪಡೆಯಿರಿ 

tags 
PDO Recruitment 2025
pdo
PDO2025
PDO NOTIFICATION 2025
PDO LATEST UPDATE
PDO UPDATES 
PDO LIST
PDO NEW LIST 


WhatsApp Group Join Now
Telegram Group Join Now
ನವೀನ ಹಳೆಯದು