ಭಾರತದ ಇತಿಹಾಸ ಪ್ರಮುಖ ಪ್ರಶ್ನೋತ್ತರ PDF | KPSC, Karnataka Police, SDA, FDA, PDO ಪರೀಕ್ಷೆಗೆ ಉಪಯುಕ್ತ
ಇತಿಹಾಸ
101. ಗುಪ್ತ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎಂದು ಯಾರನ್ನು ಪರಿಗಣಿಸಲಾಗುತ್ತದೆ?
ಉತ್ತರ: ಚಂದ್ರಗುಪ್ತ I.
102. ಚಂದ್ರಗುಪ್ತ I ಯಾವ ವಂಶದ ರಾಜಕುಮಾರಿಯನ್ನು ವಿವಾಹವಾದರು?
ಉತ್ತರ: ಲಿಚ್ಛವಿ ವಂಶ.
103. ಚಂದ್ರಗುಪ್ತ I ರಾಣಿಯ ಹೆಸರು ಏನು?
ಉತ್ತರ: ಕುಮಾರದೇವಿ.
104. ಸಮುದ್ರಗುಪ್ತನ ಸಾಧನೆಗಳನ್ನು ವಿವರಿಸುವ ಶಾಸನ ಯಾವುದು?
ಉತ್ತರ: ಪ್ರಯಾಗ ಪ್ರಶಸ್ತಿ.
105. ಪ್ರಯಾಗ ಪ್ರಶಸ್ತಿಯನ್ನು ರಚಿಸಿದವರು ಯಾರು?
ಉತ್ತರ: ಹರಿಷೇಣ.
106. ಸಮುದ್ರಗುಪ್ತನು ಯಾವ ಸಂಗೀತ ವಾದ್ಯದಲ್ಲಿ ಪರಿಣತನಾಗಿದ್ದನು?
ಉತ್ತರ: ವೀಣೆ.
107. ಸಮುದ್ರಗುಪ್ತನ ಚಿನ್ನದ ನಾಣ್ಯಗಳಲ್ಲಿ ಯಾವ ವಾದ್ಯವನ್ನು ನುಡಿಸುತ್ತಿರುವ ಚಿತ್ರವಿದೆ?
ಉತ್ತರ: ವೀಣೆ.
108. ಚಂದ್ರಗುಪ್ತ II ಯಾವ ಶಕ ರಾಜನನ್ನು ಸೋಲಿಸಿದನು?
ಉತ್ತರ: ಪಶ್ಚಿಮ ಕ್ಷತ್ರಪರು.
109. ಚಂದ್ರಗುಪ್ತ II ಸಾಮ್ರಾಜ್ಯದ ಪ್ರಮುಖ ಬಂದರು ಯಾವುದು?
ಉತ್ತರ: ಭರೂಚ್.
110. ಗುಪ್ತರ ಕಾಲದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ಧರಾದ ಖಗೋಳಶಾಸ್ತ್ರಜ್ಞ ಯಾರು?
ಉತ್ತರ: ಆರ್ಯಭಟ.
111. 'ಆರ್ಯಭಟೀಯ' ಕೃತಿಯ ಕರ್ತೃ ಯಾರು?
ಉತ್ತರ: ಆರ್ಯಭಟ.
112. ಶೂನ್ಯದ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ ಭಾರತೀಯ ಗಣಿತಜ್ಞ ಯಾರು?
ಉತ್ತರ: ಆರ್ಯಭಟ.
113. 'ಪಂಚಸಿದ್ಧಾಂತಿಕಾ' ಕೃತಿಯನ್ನು ರಚಿಸಿದವರು ಯಾರು?
ಉತ್ತರ: ವರಾಹಮಿಹಿರ.
114. 'ಬೃಹತ್ಸಂಹಿತೆ' ಕೃತಿಯ ಕರ್ತೃ ಯಾರು?
ಉತ್ತರ: ವರಾಹಮಿಹಿರ
115. ಗುಪ್ತರ ಕಾಲದ ಪ್ರಸಿದ್ಧ ವೈದ್ಯ ಯಾರು?
ಉತ್ತರ: ಧನ್ವಂತರಿ.
116. 'ಮುದ್ರಾರಾಕ್ಷಸ' ನಾಟಕದ ಕರ್ತೃ ಯಾರು?
ಉತ್ತರ: ವಿಶಾಖದತ್ತ.
117. 'ದೇವೀಚಂದ್ರಗುಪ್ತಂ' ಕೃತಿಯ ಕರ್ತೃ ಯಾರು?
ಉತ್ತರ: ವಿಶಾಖದತ್ತ.
118. ಗುಪ್ತರ ಕಾಲದಲ್ಲಿ ಸಂಸ್ಕೃತ ಭಾಷೆಗೆ ಹೇಸಗಿನ ಸ್ಥಾನ ದೊರೆಯಿತು?
ಉತ್ತರ: ರಾಜಭಾಷೆಯ ಸ್ಥಾನ.
119. ಗುಪ್ತ ಸಾಮ್ರಾಜ್ಯದ ಕೊನೆಯ ಪ್ರಬಲ ರಾಜ ಯಾರು?
ಉತ್ತರ: ಸ್ಕಂದಗುಪ್ತ.
120. ಹೂಣರ ದಾಳಿಯನ್ನು ಯಶಸ್ವಿಯಾಗಿ ತಡೆದ ಗುಪ್ತ ರಾಜ ಯಾರು?
ಉತ್ತರ: ಸ್ಕಂದಗುಪ್ತ.
121. ಹರ್ಷವರ್ಧನ ಯಾವ ವಂಶಕ್ಕೆ ಸೇರಿದನು?
ಉತ್ತರ: ಪುಷ್ಯಭೂತಿ ವಂಶ.
122. ಹರ್ಷವರ್ಧನನ ರಾಜಧಾನಿ ಯಾವುದು?
ಉತ್ತರ: ಕನೌಜ್
123. ಹರ್ಷವರ್ಧನನ ತಂದೆ ಯಾರು?
ಉತ್ತರ: ಪ್ರಭಾಕರವರ್ಧನ.
124. ಹರ್ಷವರ್ಧನನ ಸಹೋದರನ ಹೆಸರು ಏನು?
ಉತ್ತರ: ರಾಜ್ಯವರ್ಧನ.
125. ಹರ್ಷವರ್ಧನನ ಸಹೋದರಿಯ ಹೆಸರು ಏನು?
ಉತ್ತರ: ರಾಜ್ಯಶ್ರೀ.
126. ಹರ್ಷವರ್ಧನನ ಆಸ್ಥಾನ ಕವಿ ಯಾರು?
ಉತ್ತರ: ಬಾಣಭಟ್ಟ.
127. 'ಹರ್ಷಚರಿತೆ' ಕೃತಿಯ ಕರ್ತೃ ಯಾರು?
ಉತ್ತರ: ಬಾಣಭಟ್ಟ.
128. 'ಕಾದಂಬರಿ' ಕೃತಿಯನ್ನು ಬರೆದವರು ಯಾರು?
ಉತ್ತರ: ಬಾಣಭಟ್ಟ.
129. ಹರ್ಷವರ್ಧನನು ಸ್ವತಃ ರಚಿಸಿದ ನಾಟಕಗಳಲ್ಲಿ ಒಂದು ಯಾವುದು?
ಉತ್ತರ: ನಾಗಾನಂದ.
130. ಹರ್ಷವರ್ಧನನ ಇನ್ನೊಂದು ನಾಟಕ ಯಾವುದು?
ಉತ್ತರ: ರತ್ನಾವಳಿ.
131. ಚೀನಾದ ಯಾತ್ರಿಕ ಹ್ಯೂಯೆನ್ತ್ಸಾಂಗ್ ಯಾರ ಕಾಲದಲ್ಲಿ ಭಾರತಕ್ಕೆ ಬಂದನು?
ಉತ್ತರ: ಹರ್ಷವರ್ಧನ.
132. ಹ್ಯೂಯೆನ್ತ್ಸಾಂಗ್ ಭಾರತದಲ್ಲಿ ಎಷ್ಟು ವರ್ಷಗಳ ಕಾಲ ಇದ್ದನು?
ಉತ್ತರ: ಸುಮಾರು 15 ವರ್ಷ.
133. ಹ್ಯೂಯೆನ್ತ್ಸಾಂಗ್ ಯಾವ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದನು?
ಉತ್ತರ: ನಳಂದ.
134. ಹರ್ಷವರ್ಧನನು ಯಾವ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದನು?
ಉತ್ತರ: ಬೌದ್ಧ ಧರ್ಮ.
135. ಹರ್ಷವರ್ಧನನು ಐದು ವರ್ಷಗಳಿಗೊಮ್ಮೆ ಯಾವ ಸ್ಥಳದಲ್ಲಿ ಮಹಾಸಭೆ ನಡೆಸುತ್ತಿದ್ದನು?
ಉತ್ತರ: ಪ್ರಯಾಗ.
136. ಹರ್ಷವರ್ಧನನನ್ನು ಸೋಲಿಸಿದ ದಕ್ಷಿಣ ಭಾರತದ ರಾಜ ಯಾರು?
ಉತ್ತರ: ಪುಲಿಕೇಶಿ II.
137. ಪುಲಿಕೇಶಿ II ಯಾವ ವಂಶಕ್ಕೆ ಸೇರಿದನು?
ಉತ್ತರ: ಬಾದಾಮಿ ಚಾಲುಕ್ಯರು.
138. ಪುಲಿಕೇಶಿ II ರ ಆಸ್ಥಾನಕ್ಕೆ ಬಂದ ಪರ್ಷಿಯನ್ ರಾಜದೂತ ಯಾವ ರಾಜನ ಪ್ರತಿನಿಧಿಯಾಗಿದ್ದನು?
ಉತ್ತರ: ಖುಸ್ರು II.
139. ಐಹೊಳೆ ಶಾಸನವನ್ನು ರಚಿಸಿದವರು ಯಾರು?
ಉತ್ತರ: ರವಿಕೀರ್ತಿ.
140. ಐಹೊಳೆ ಶಾಸನವು ಯಾರ ವಿಜಯಗಳನ್ನು ವರ್ಣಿಸುತ್ತದೆ?
ಉತ್ತರ: ಪುಲಿಕೇಶಿ II.
141. ಸಂಗಂ ಸಾಹಿತ್ಯವು ಯಾವ ಭಾಷೆಯಲ್ಲಿ ರಚಿಸಲ್ಪಟ್ಟಿದೆ?
ಉತ್ತರ: ತಮಿಳು.
142. ಸಂಗಂ ಯುಗವು ಮುಖ್ಯವಾಗಿ ಯಾವ ಪ್ರದೇಶಕ್ಕೆ ಸಂಬಂಧಿಸಿದೆ?
ಉತ್ತರ: ತಮಿಳುನಾಡು.
143. ಸಂಗಂ ಯುಗದಲ್ಲಿ ಪ್ರಮುಖ ಮೂರು ರಾಜವಂಶಗಳು ಯಾವುವು?
ಉತ್ತರ: ಚೇರ, ಚೋಳ ಮತ್ತು ಪಾಂಡ್ಯ.
144. ಚೇರರ ರಾಜಧಾನಿ ಯಾವುದು?
ಉತ್ತರ: ವಂಜಿ.
145. ಪ್ರಾಚೀನ ಚೋಳರ ರಾಜಧಾನಿ ಯಾವುದು?
ಉತ್ತರ: ಉರಯ್ಯೂರು.
146. ಪಾಂಡ್ಯರ ರಾಜಧಾನಿ ಯಾವುದು?
ಉತ್ತರ: ಮಧುರೈ.
147. ಸಂಗಂ ಯುಗದ ಪ್ರಸಿದ್ಧ ಕೃತಿ 'ಶಿಲಪ್ಪದಿಕಾರಂ'ನ ಕರ್ತೃ ಯಾರು?
ಉತ್ತರ: ಇಳಂಗೋ ಅಡಿಗಳ್.
148. 'ಮಣಿಮೇಖಲೈ' ಕೃತಿಯನ್ನು ರಚಿಸಿದವರು ಯಾರು?
ಉತ್ತರ: ಸತ್ತನಾರ್.
149. ಸಂಗಂ ಸಾಹಿತ್ಯದಲ್ಲಿ ಸಮುದ್ರ ವ್ಯಾಪಾರಕ್ಕೆ ಪ್ರಸಿದ್ಧವಾದ ಬಂದರು ಯಾವುದು?
ಉತ್ತರ: ಪೂಹಾರ್.
150. ಸಂಗಂ ಯುಗದಲ್ಲಿ ರೋಮನ್ನರೊಂದಿಗೆ ವ್ಯಾಪಾರ ನಡೆಸಿದ ಪ್ರಮುಖ ವಸ್ತು ಯಾವುದು?
ಉತ್ತರ: ಮೆಣಸು.
151. ಬಾದಾಮಿ ಚಾಲುಕ್ಯರ ಸ್ಥಾಪಕ ಯಾರು?
ಉತ್ತರ: ಪುಲಿಕೇಶಿ I.
152. ಬಾದಾಮಿ ಚಾಲುಕ್ಯರ ರಾಜಧಾನಿ ಯಾವುದು?
ಉತ್ತರ: ಬಾದಾಮಿ.
153. ಬಾದಾಮಿಯ ಪ್ರಾಚೀನ ಹೆಸರು ಏನು?
ಉತ್ತರ: ವಾತಾಪಿ.
154. ಬಾದಾಮಿ ಗುಹಾ ದೇವಾಲಯಗಳು ಯಾವ ರಾಜ್ಯದಲ್ಲಿವೆ?
ಉತ್ತರ: ಕರ್ನಾಟಕ.
155. ಐಹೊಳೆ ಯಾವ ಕಾರಣಕ್ಕೆ ಪ್ರಸಿದ್ಧವಾಗಿದೆ?
ಉತ್ತರ: ದೇವಾಲಯ ವಾಸ್ತುಶಿಲ್ಪ.
156. ಪಟ್ಟದಕಲ್ಲು ಯಾವ ಕಾರಣಕ್ಕೆ ಪ್ರಸಿದ್ಧವಾಗಿದೆ?
ಉತ್ತರ: ಚಾಲುಕ್ಯರ ದೇವಾಲಯಗಳು.
157. ಪಟ್ಟದಕಲ್ಲು ಯಾವ ಸಂಸ್ಥೆಯ ವಿಶ್ವ ಪರಂಪರೆ ತಾಣವಾಗಿದೆ?
ಉತ್ತರ: ಯುನೆಸ್ಕೋ.
158. ವಿರೂಪಾಕ್ಷ ದೇವಾಲಯವು ಪಟ್ಟದಕಲ್ಲಿನಲ್ಲಿ ಯಾರ ಕಾಲದಲ್ಲಿ ನಿರ್ಮಾಣವಾಯಿತು?
ಉತ್ತರ: ವಿಕ್ರಮಾದಿತ್ಯ II.
159. ಬಾದಾಮಿ ಚಾಲುಕ್ಯರ ಪ್ರಸಿದ್ಧ ರಾಜ ಯಾರು?
ಉತ್ತರ: ಪುಲಿಕೇಶಿ II.
160. ಪುಲಿಕೇಶಿ II ಯನ್ನು ಸೋಲಿಸಿದ ಪಲ್ಲವ ರಾಜ ಯಾರು?
ಉತ್ತರ: ನರಸಿಂಹವರ್ಮನ್ I.
161. ನರಸಿಂಹವರ್ಮನ್ I ಗೆ ಇದ್ದ ಬಿರುದು ಯಾವುದು?
ಉತ್ತರ: ಮಾಮಲ್ಲ.
162. ಪಲ್ಲವರ ರಾಜಧಾನಿ ಯಾವುದು?
ಉತ್ತರ: ಕಾಂಚೀಪುರಂ.
163. ಮಹಾಬಲಿಪುರದ ಮತ್ತೊಂದು ಹೆಸರು ಏನು?
ಉತ್ತರ: ಮಾಮಲ್ಲಪುರಂ.
164. ಮಹಾಬಲಿಪುರದ ಪಂಚರಥಗಳನ್ನು ನಿರ್ಮಿಸಿದವರು ಯಾರು?
ಉತ್ತರ: ಪಲ್ಲವರು.
165. ಕೈಲಾಸನಾಥ ದೇವಾಲಯವು ಯಾವ ನಗರದಲ್ಲಿದೆ?
ಉತ್ತರ: ಕಾಂಚೀಪುರಂ.
166. ಶೋರ್ ದೇವಾಲಯವು ಎಲ್ಲಿದೆ?
ಉತ್ತರ: ಮಹಾಬಲಿಪುರಂ.
167. ಪಲ್ಲವ ವಂಶದ ಸ್ಥಾಪಕ ಎಂದು ಯಾರನ್ನು ಪರಿಗಣಿಸಲಾಗುತ್ತದೆ?
ಉತ್ತರ: ಸಿಂಹವಿಷ್ಣು.
168. ಮಹೇಂದ್ರವರ್ಮನ್ I ಯಾವ ಕ್ಷೇತ್ರದಲ್ಲಿ ಪ್ರಸಿದ್ಧನಾಗಿದ್ದನು?
ಉತ್ತರ: ಗುಹಾ ದೇವಾಲಯ ನಿರ್ಮಾಣ.
169. ಪಲ್ಲವ ಶೈಲಿಯ ವಾಸ್ತುಶಿಲ್ಪದ ಪ್ರಮುಖ ಲಕ್ಷಣ ಯಾವುದು?
ಉತ್ತರ: ಏಕಶಿಲಾ ದೇವಾಲಯಗಳು.
170. ನರಸಿಂಹವರ್ಮನ್ I ವಾತಾಪಿಯನ್ನು ವಶಪಡಿಸಿಕೊಂಡ ನಂತರ ಪಡೆದ ಬಿರುದು ಯಾವುದು?
ಉತ್ತರ: ವಾತಾಪಿಕೊಂಡ.
171. ರಾಷ್ಟ್ರಕೂಟ ವಂಶದ ಸ್ಥಾಪಕ ಯಾರು?
ಉತ್ತರ: ದಂತಿದುರ್ಗ
172. ರಾಷ್ಟ್ರಕೂಟರ ರಾಜಧಾನಿ ಯಾವುದು?
ಉತ್ತರ: ಮಾನ್ಯಖೇಟ.
173. ಮಾನ್ಯಖೇಟ ಈಗ ಯಾವ ಜಿಲ್ಲೆಯಲ್ಲಿ ಇದೆ?
ಉತ್ತರ: ಕಲಬುರಗಿ.
174. ರಾಷ್ಟ್ರಕೂಟರ ಪ್ರಸಿದ್ಧ ರಾಜ ಯಾರು?
ಉತ್ತರ: ಅಮೋಘವರ್ಷ I.
175. 'ಕವಿರಾಜಮಾರ್ಗ' ಕೃತಿಯ ಆಶ್ರಯದಾತ ಯಾರು?
ಉತ್ತರ: ಅಮೋಘವರ್ಷ I.
176. 'ಕವಿರಾಜಮಾರ್ಗ' ಯಾವ ಭಾಷೆಯ ಮೊದಲ ಲಭ್ಯ ಕಾವ್ಯಶಾಸ್ತ್ರ ಗ್ರಂಥವಾಗಿದೆ?
ಉತ್ತರ: ಕನ್ನಡ.
177. 'ಕವಿರಾಜಮಾರ್ಗ' ಕೃತಿಯನ್ನು ರಚಿಸಿದವರು ಯಾರು?
ಉತ್ತರ: ಶ್ರೀವಿಜಯ.
178. ಎಲ್ಲೋರಾದ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದ ರಾಷ್ಟ್ರಕೂಟ ರಾಜ ಯಾರು?
ಉತ್ತರ: ಕೃಷ್ಣ I.
179. ಎಲ್ಲೋರಾ ಗುಹೆಗಳು ಯಾವ ರಾಜ್ಯದಲ್ಲಿವೆ?
ಉತ್ತರ: ಮಹಾರಾಷ್ಟ್ರ.
180. ಕೈಲಾಸನಾಥ ದೇವಾಲಯವು ಯಾವ ರೀತಿಯ ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದೆ?
ಉತ್ತರ: ಏಕಶಿಲಾ ಶಿಲ್ಪ.
181. ಚೋಳ ಸಾಮ್ರಾಜ್ಯದ ಮಹಾನ್ ರಾಜ ಯಾರು?
ಉತ್ತರ: ರಾಜರಾಜ ಚೋಳ I.
182. ರಾಜರಾಜ ಚೋಳ I ನಿರ್ಮಿಸಿದ ಪ್ರಸಿದ್ಧ ದೇವಾಲಯ ಯಾವುದು?
ಉತ್ತರ: ಬೃಹದೀಶ್ವರ ದೇವಾಲಯ.
183. ಬೃಹದೀಶ್ವರ ದೇವಾಲಯ ಎಲ್ಲಿದೆ?
ಉತ್ತರ: ತಂಜಾವೂರು.
184. ರಾಜೇಂದ್ರ ಚೋಳ I ಹೊಸ ರಾಜಧಾನಿಯಾಗಿ ಯಾವ ನಗರವನ್ನು ನಿರ್ಮಿಸಿದನು?
ಉತ್ತರ: ಗಂಗೈಕೊಂಡಚೋಳಪುರಂ.
185. ಚೋಳರು ಯಾವ ಆಡಳಿತ ವ್ಯವಸ್ಥೆಗೆ ಪ್ರಸಿದ್ಧರಾಗಿದ್ದರು?
ಉತ್ತರ: ಸ್ಥಳೀಯ ಸ್ವರಾಜ್ಯ ವ್ಯವಸ್ಥೆ.
186. ಚೋಳರ ಕಾಲದಲ್ಲಿ ಗ್ರಾಮಸಭೆಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಊರ್.
187. ಬ್ರಾಹ್ಮಣರ ಗ್ರಾಮಸಭೆಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಸಭೆ.
188. ವ್ಯಾಪಾರಿಗಳ ಸಂಘವನ್ನು ಏನೆಂದು ಕರೆಯಲಾಗುತ್ತಿತ್ತು?
ಉತ್ತರ: ನಗರಂ.
189. ಚೋಳರ ಪ್ರಮುಖ ನೌಕಾಪಡೆಯು ಯಾವ ದೇಶದವರೆಗೂ ದಂಡಯಾತ್ರೆ ನಡೆಸಿತು?
ಉತ್ತರ: ಶ್ರೀವಿಜಯ.
190. ಶ್ರೀವಿಜಯ ಸಾಮ್ರಾಜ್ಯವು ಇಂದಿನ ಯಾವ ದೇಶದ ಭಾಗವಾಗಿತ್ತು?
ಉತ್ತರ: ಇಂಡೋನೇಷ್ಯಾ.
191. ಹೊಯ್ಸಳ ವಂಶದ ಆರಂಭಿಕ ರಾಜಧಾನಿ ಯಾವುದು?
ಉತ್ತರ: ಬೆಳೂರು.
192. ಹೊಯ್ಸಳರ ನಂತರದ ರಾಜಧಾನಿ ಯಾವುದು?
ಉತ್ತರ: ದ್ವಾರಸಮುದ್ರ (ಹಳೇಬೀಡು).
193. ಹೊಯ್ಸಳ ವಂಶದ ಸ್ಥಾಪಕ ಯಾರು?
ಉತ್ತರ: ನೃಪಕಾಮ.
194. ಹೊಯ್ಸಳ ಸಾಮ್ರಾಜ್ಯದ ಶ್ರೇಷ್ಠ ರಾಜ ಯಾರು?
ಉತ್ತರ: ವಿಷ್ಣುವರ್ಧನ.
195. ವಿಷ್ಣುವರ್ಧನನು ಯಾವ ಪ್ರಸಿದ್ಧ ದೇವಾಲಯವನ್ನು ನಿರ್ಮಿಸಿದನು?
ಉತ್ತರ: ಚೆನ್ನಕೇಶವ ದೇವಾಲಯ.
196. ಚೆನ್ನಕೇಶವ ದೇವಾಲಯ ಎಲ್ಲಿದೆ?
ಉತ್ತರ: ಬೆಳೂರು.
197. ಹೊಯ್ಸಳೇಶ್ವರ ದೇವಾಲಯ ಎಲ್ಲಿದೆ?
ಉತ್ತರ: ಹಳೇಬೀಡು.
198. ಕೇಶವ ದೇವಾಲಯ ಎಲ್ಲಿದೆ?
ಉತ್ತರ: ಸೋಮನಾಥಪುರ.
199. ಹೊಯ್ಸಳ ದೇವಾಲಯಗಳ ಪ್ರಮುಖ ನಿರ್ಮಾಣ ಕಲ್ಲು ಯಾವುದು?
ಉತ್ತರ: ಸೋಪ್ಸ್ಟೋನ್ (ಕ್ಲೋರಿಟಿಕ್ ಶಿಸ್ಟ್).
199. ಹೊಯ್ಸಳರ ವಂಶದ ಲಾಂಛನದಲ್ಲಿ ಯಾವ ದೃಶ್ಯ ಚಿತ್ರಿತವಾಗಿದೆ?
ಉತ್ತರ: ಸಾಲನು ಹುಲಿಯನ್ನು ಸಂಹರಿಸುವ ದೃಶ್ಯ.



0 ಕಾಮೆಂಟ್‌ಗಳು