ಬಿಪಿಎಲ್ ಕಾರ್ಡ್‌ದಾರರಿಗೆ ಶಾಕ್! 8 ಲಕ್ಷ ಕಾರ್ಡ್ ರದ್ದು
ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL Card) ಪರಿಶೀಲನೆಗೆ ಸಿಎಂ ಸಿದ್ದರಾಮಯ್ಯ ನವರು ಆದೇಶ ನೀಡದಿದ್ದರು . ಅದರಂತೆ ಈಗ ಎಂಟು ಲಕ್ಷ ಅನಧಿಕೃತ ಬಿಪಿಎಲ್ ಕಾರ್ಡ್ ಬಳಕೆದಾರರನ್ನು ಪತ್ತೆ ಮಾಡಲಾಗಿದೆ. ಈಗ ಇವರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ
ಬೆಳಗಾವಿ :ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL Card) ಬಳಕೆದಾರರ ವಿರುದ್ಧ ರಾಜ್ಯ ಸರ್ಕಾರ ಸಮರ ಸಾರಿದೆ. ಕೆಲವು ವಾರಗಳ ಹಿಂದೆ ಮಾನ್ಯ ಮುಖ್ಯ ಮಂತ್ರಿ ಗಳಾದ ಶ್ರೀ ಸಿದ್ದರಾಮಯ್ಯ ನವರು ಅನಧೀಕೃತ ಬಿಪಿಎಲ್ ಕಾರ್ಡ್ ಬಳಕೆದಾರರನ್ನು ಪತ್ತೆ ಮಾಡುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರ ಭಾಗವಾಗಿ ಈಗ 8 ಲಕ್ಷ ಬಿಎಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ ಎಂಬ ಮಾಹಿತಿ ಇದ
ಬಿಪಿಎಲ್ ಕಾರ್ಡ್ ಆಧಾರದ ಮೇಲೆ ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆಯ ಪ್ರಯೋಜನಗಳನ್ನು ನೀಡುತ್ತಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆ (Gruhalakshmi yojane) ಹಣವನ್ನು ಇದರ ಆಧಾರದ ಮೇಲೆಯೇ ನೀಡಲಾಗುತ್ತಿತ್ತು. ಆದರೆ ಈಗ ಈ ಯೋಜನೆಯಿಂದ ಎಂಟು ಲಕ್ಷ ಮಂದಿ ಹೊರಗುಳಿಯಲಿದ್ದಾರಾ ಅನ್ನೋ ಪ್ರಶ್ನೆ ಮೂಡುವಂತೆ ಆಗಿದೆ.
ಕೋಟಿಗಟ್ಟಲೆ ಆಸ್ತಿ ಇರುವವರ ಬಳಿಯೂ ಸಹ ಬಿಪಿಎಲ್ ಕಾರ್ಡ್ ಇದೆ ಅನ್ನೋದನ್ನು ಕಂಡುಕೊಳ್ಳಲಾಗಿದೆ. ಪರಿಣಾಮ ಎಂಟು ಲಕ್ಷಕ್ಕೂಅಧಿಕ ಕಾರ್ಡ್‌ಗಳನ್ನು ಈಗ ರದ್ದು ಮಾಡಲು ಸರ್ಕಾರ ಸಜ್ಜಾಗಿದೆ ಎಂಬ ಮಾಹಿತಿ ಇದೆ. ಸಿಎಂ ಸೂಚನೆ ಮೇರೆಗೆ ಆಹಾರ ಇಲಾಖೆಯಿಂದ ಈಗಾಗಲೇ ವಿಶೇಷ ಕಾರ್ಯಾಚರಣೆ ನಡೆಸಿದೆ. ಇದರಲ್ಲಿ 12,68,097 ಅನುಮಾನಸ್ಪಾದ ರೇಷನ್ ಕಾರ್ಡ್ ಪತ್ತೆಯಾಗಿದ್ದವು. ಇವುಗಳಲ್ಲಿ 8 ಲಕ್ಷ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಹಾರ ಇಲಾಖೆ ನೀಡಿದ ವರದಿಯಲ್ಲಿ ಏನಿದೆ
- ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವವವರು
- 19,690 ಮಂದಿ ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿರುವವರು.
- ₹25 ಲಕ್ಷ ರೂ.ಗಿಂತ ಅಧಿಕ ವಹಿವಾಟು ಮೀರಿರುವ 2,684 ಮಂದಿ ಬಳಿ ಬಿಪಿಎಲ್ ಕಾರ್ಡ್.ಇವೆ
- ಮೃತಪಟ್ಟವರ ಹೆಸರು ಮತ್ತು ನಕಲಿ ಕಾರ್ಡ್ ಬಳಸಿ ಬಿಪಿಎಲ್ ಕಾರ್ಡ್ ಬಳಕೆ.
- ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯುತ್ತಿರುವುದು ಬೆಳಕಿಗೆ.
- ರಾಜ್ಯದಲ್ಲಿ ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ರೇಷನ್ ಕಾರ್ಡ್ ನೀಡಲಾಗಿರುವ ವಿವರ.
- ಇ-ಕೆವೈಸಿ ಮಾಡಿಸದೆ ಇರುವವರ ಸಂಖ್ಯೆ-6,16,170
- ₹1.20 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿದವರು- 5,13,680
- ಅಂತಾರಾಜ್ಯ ಪಡಿತರ ಚೀಟಿದಾರರು-57,864
- 7.5 ಎಕರೆಗಿಂತ ಜಾಸ್ತಿ ಇರುವವರು- 33,475
- 6 ತಿಂಗಳಿಂದ ರೇಷನ್ ಪಡೆಯದವರು- 39,893
- ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವವವರ ಕಾರ್ಡ್-79,690
- 25 ಲಕ್ಷ ರೂ. ವಹಿವಾಟು ಮೀರಿದವರ ಕಾರ್ಡ್-2,659
- ಮೃತ ಸದಸ್ಯರ ಹೆಸರಲ್ಲಿ ರೇಷನ್ ಕಾರ್ಡ್ - 1,425
ಇದನ್ನು ಓದಿ
ನಿಮ್ಮ ಕಾರ್ಡ್ ರದ್ದಾಗಿದೆಯೇ ಇಲ್ಲವೇ ಅನ್ನೋದನ್ನು ಈ ರೀತಿ ಚೆಕ್ ಮಾಡಿ
ನಿಮ್ಮ ಕಾರ್ಡ್ ರದ್ದಾಗಿದೆ ಅಥವಾ ಇಲ್ಲ ಅನ್ನೋದನ್ನ ತಿಳಿದುಕೊಳ್ಳಬೇಕು ಅನ್ನೋ ಹಂಬಲ ಖಂಡಿತಾ ನಿಮ್ಮಲ್ಲಿ ಈಗ ಇರುತ್ತದೆ. ಈ ಬಗ್ಗೆ ಯಾವುದೇ ಪ್ರಶ್ನೆ ನಿಮ್ಮಲ್ಲಿ ಇದ್ದರೆ https://ahara.kar.nic.in/Home/EServices ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ಮಾಡುವ ಮೂಲಕ ನಿಮ್ಮ ರೇಷನ್ ಕಾರ್ಡ್‌ನ ಸ್ಟೇಟಸ್ ಅನ್ನು ತಿಳಿಯಬಹುದು.
tags
#bplrationcard #bplrationcardseayushmancardkaisebanaye #bplrationcard2025 #bplrationcardnewscheme #bplrationcardkaisebanaye #bplrationcardkaisecheckkare #bplrationcardkaisahotahai #bplrationcardkaisedownloadkaren #bplrationcardkefayde #bplrationcardmalayalam #bplrationcardcolour #bplrationcardapplyonlinekarnataka #bplrationcardkaunsahotahai #bplrationcardkyckaisekare #bplrationcardmenaamkaisejode #bplrationcardand #bplrationcardkaisebantahai #bplrationcardkyahotahai


0 ಕಾಮೆಂಟ್‌ಗಳು