ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌

 ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌

ಕರ್ನಾಟಕ ರಾಜ್ಯದಲ್ಲಿ ಪಡಿತರ ಚೀಟಿ ಕೂಡ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬರೀ ಪಡಿತರ ಪಡೆಯಲು ಅಷ್ಟೇ ಅಲ್ಲದೆ, ಬ್ಯಾಂಕ್‌ ಸೇವೆ, ಮತ್ತು ಇನ್ನಿತರ ಸರ್ಕಾರಿ ಸಲಭ್ಯಗಳು ಸೇರಿದಂತೆ ಹಲವು ವಿಚಾರಕ್ಕೆ ಬೇಕೇ ಬೇಕಾಗುತ್ತದೆ. ಒಂದು ವೇಳೆ ಇದರಲ್ಲಿ ತಪ್ಪುಗಳಿದ್ದರೆ, ಕೆಲವೊಮ್ಮೆ ಯಾವುದೇ ಅರ್ಜಿ ಸಲ್ಲಿಸುವ ವೇಳೆ ಪರಿಗಣೆಗೆ ತೆಗೆದುಕೊಳ್ಳಲಾಗುವುದಿಲ್ಲ.
ಅಂತಹ ಪಡಿತರ ಚೀಟಿದಾರರಿಗೆ ಇದೀಗ ಗುಡ್‌ ನ್ಯೂಸ್‌ವೊಂದು ಇದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಬ್ಲಾಗದಲ್ಲಿ ನೀಡಲಾಗಿದೆ 


ಕರ್ನಾಟಕ ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದ್ದು, ಕೆಲವರನ್ನು ಎಪಿಎಲ್‌ಗೆ ವರ್ಗಾಹಿಸುವ ಕಾರ್ಯ ನಡೆಯುತ್ತಿದೆ. ಈ ನಡುವೆಯೇ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಹಾಗಾದ್ರೆ ಕೊನೇ ದಿನಾಂಕ ಯಾವಾಗ? ಏನೆಲ್ಲಾ ತಿದ್ದಪಡಿಸಿ ಮಾಡಿಸಬಹುದು ಹಾಗೂ ಬೇಕಾಗುವ ದಾಖಲೆಗಳೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ
ಇದನ್ನು ಓದಿ


ಅರ್ಹರು ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದುವ ಮೂಲಕ ಬಡವರಿಗೆ ಸಿಗಬೇಕಾದ ಪಡಿತರವನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಂತವರಿಗೆ ಕಡಿವಾಣ ಹಾಕುವ ಕೆಲಸ ಮುಂದುವರೆದಿದೆ. ಈಗಾಗಲೇ ೮ ಲಕ್ಷ ದ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ  ಈ ಮೂಲಕ ಬಡವರಿಗೆ ಸಿಗಬೇಕಾದ ಪಡಿತರವನ್ನು ಸರಿಯಾಗಿ, ಸರಿಯಾದ ಸಮಯಕ್ಕೆ ವಿತರಣೆ ಮಾಡುವ ಉದ್ಧೇಶವನ್ನು ಹೊಂದಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ನಡುವೆಯೇ ಪಡಿತ ತಿದ್ದುಪಡಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್‌ ನೀಡಲಾಗಿದೆ.
ಪಡಿತರ ತಿದ್ದುಪಡಿ ಕಾರ್ಯವನ್ನು ಆಗಸ್ಟ್‌ ಅಂತ್ಯದವರೆಗೂ ನೀಡಲಾಗಿತ್ತು. ಬಳಿಕ ಮತ್ತೆ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ ಸೆಪ್ಟೆಂಬರ್ 30ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೂ ಪಡಿತರ ಚೀಟಿ ತಿದ್ದಪಡಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ತಿದ್ದುಪಡಿಗೆ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು

  • * ಬೆಂಗಳೂರು ಒನ್

    * ಗ್ರಾಮ ಒನ್

    * ಸೈಬರ್ ಸೆಂಟರ್‌

  • ಈ ಮೇಲಿನ  ಕೇಂದ್ರಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಎಪಿಎಲ್ ಕಾರ್ಡ್ ಪಡೆಯುವವರು ಸಹ ಆನ್‌ಲೈನಲ್ಲಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ https://ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಏನೆಲ್ಲಾ ತಿದ್ದುಪಡಿ ಮಾಡಬಹುದು 

  • ಹೊಸ ಸದಸ್ಯರ ಹೆಸರು ಸೇರ್ಪಡೆ

    * ವಿಳಾಸ ಬದಲಾವಣೆ

    * ಹೆಸರು ತೆಗೆದುಹಾಕುವುದು

    * ಕುಟುಂಬದ ಮುಖ್ಯಸ್ಥರ ಬದಲಾವಣೆ

    * ಫೋಟೋ ಬದಲಾವಣೆ

ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು

ಪಡಿತರ ಚೀಟಿಯನ್ನು ತಿದ್ದುಪಡಿ  ಮಾಡಲು ಸದಸ್ಯರ ಆಧಾರ ಕಾರ್ಡ್ ಮತ್ತು ಸದಸ್ಯರ ಜಾತಿ ಮತ್ತು ಆದಾಯ 6 ವರ್ಷ ಮೆಲ್ಪಟ್ಟವರಿಗೆ ಮತ್ತು ಜನನ ಪ್ರಮಾಣ ಪತ್ರ 6 ವರ್ಷದ ಒಳಗಿನ ಮಕ್ಕಳಿಗೆ ಬೇಕಾಗುತ್ತದೆ 


ಪತ್ನಿ ಹೆಸರು ಸೇರ್ಪಡೆಗೆ ಬೇಕಾಗುವ ದಾಖಲೆಗಳು

ಆಧಾರ್ ಕಾರ್ಡ ಮತ್ತು ಮದುವೇ ಪ್ರಮಾಣ ಪಾತ್ರ ಹಾಗೂ ಪೋಷಕರ ಆಧಾರ ಕಾರ್ಡ ಮುಲಕ ಹೊಸ ಪತ್ನಿ ಹೆಸರು ಸೇರ್ಪಡೆ ಮಾಡಬಹುದಾಗಿದೆ 

ಮಗುವಿನ ಹೆಸರು ಸೇರ್ಪಡೆಗೆ ಬೇಕಾದ ದಾಖಲೆಗಳು

ಮಗುವಿನ ಹೆಸರು ಸೇರ್ಪಡೆ ಮಾಡಲು ಮಗುವಿನ ಜನನ ಪತ್ರ ಮತ್ತು ಪೋಷಕರ ಆಧಾರ ಕಾರ್ಡ್ ಮುಲಕ ಮಗುವಿನ ಹೆಸರನ್ನು ಸೇರಿಸಬಹುದು 

ಅರ್ಜಿ ಸಲ್ಲಿಸುವ ವಿಧಾನಗಳು





Previous Post Next Post