ಬಿಪಿಎಲ್ ಪಡಿತರ ಚೀಟಿದಾರರಿಗೆ ಮತ್ತೊಂದು ಬಿಗ್ ಶಾಕ್
ಹಾಯ ನಮ್ಮ ಸರಳ ಒನ್ ವೆಬ್ಸೈಟ್ ಗೆ ಆತ್ಮೀಯ ಸ್ವಾಗತ ,ಈ ನಮ್ಮ ಸರಳ ಒನ್ ತಂಡ ಈ ದಿನ ನಿಮಗೆ ಒಂದು ಒಳ್ಳೆಯ ಮಾಹಿತಿಯನ್ನು ತಂದಿದೆ ಅದು ಏನೆಂದರೆ ಪಡಿತರ ಚೀಟಿ ರದ್ದಾಗುವ ಬಗ್ಗೆ ಒಂದು ಮಾಹಿತಿ ಯನ್ನು ತಂದಿದೆ ಅದು ಏನು ಅನ್ನೋದನ್ನು ಈ ಬ್ಲಾಗದಲ್ಲಿ ನೋಡೋಣ
ಕರ್ನಾಟಕ ರಾಜ್ಯದಲ್ಲಿ ಪಡಿತರ ಚೀಟಿ ಕೂಡ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದರಲ್ಲಿ ಹಲವು ವಿಧಗಳಿದ್ದು, ಈ ಪೈಕಿ ಬಿಪಿಎಲ್ ಕಾರ್ಡ್‌ಗೆ ಹಲವು ಸರ್ಕಾರಿ ಸೌಲಭ್ಯಗಳು ದೊರೆಯಲಿವೆ. ಆದ್ದರಿಂದ ಅದಕ್ಕೆ ಅರ್ಹರಲ್ಲದವರು ಕೂಡ ಪಡಿತರ ಚೀಟಿಯನ್ನು ಪಡೆದುಕೊಡ್ಡಿದ್ದವರಿಗೆ ಇದೀಗ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇಂತಹವರಿಗೆ ಕಾರ್ಡ್ ರದ್ದಿನ ಜೊತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.
ಸಾಮಾನ್ಯವಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಆದರೆ, ಇದನ್ನು ಶ್ರೀಮಂತರು ಅಂದರೆ ಅನರ್ಹರು ಕೂಡ ಪಡೆದುಕೊಂಡಿರುವುದು ಅಂತ ಸರ್ವೆಯಲ್ಲಿ ಬೆಳಕಿಗೆ ಬಂದಿದೆ. ನಕಲಿ ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ವೇಳೆ ಇಂತಹ ಕಾರ್ಡ್‌ಗಳನ್ನು ಪತ್ತೆಯಾಗಿವೆ. ಇನ್ನೂ ಕೂಡ ಇಂತಹವರು ಇದ್ದು, ಈ ಹಿನ್ನೆಲೆ ಪರಿಶೀಲನೆ ಕಾರ್ಯ ಮುಂದುವರೆಸಿದೆ.
ಅನರ್ಹರನ್ನು ಗುರುತಿಸಿ ಅಂತಹವರ ಬಳಿಯ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದ್ದು, ಇದರಲ್ಲಿ ಕೆಲವರನ್ನು ಎಪಿಎಲ್‌ಗೆ ವರ್ಗಾಹಿಸುವ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದ್ದು, ಅಂತವರ ವಿರುದ್ಧ ದಂಡಾಸ್ತ್ರದ ಕ್ರಮಕ್ಕೆ ಮುಂದಾಗಿದೆ. ಅರ್ಹರಿಗೆ ಸಿಗಬೇಕಾದ ಸೌಲಭ್ಯ ಒದಗಿಸಲು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ 12,00,000ಕ್ಕೂ ಹೆಚ್ಚು ಪಡಿತರ ಚೀಟಿಗಳು ಪತ್ತೆಯಾಗಿದ್ದು, ಇವುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿರುವ ಒಂದು ನ್ಯಾಯಬೆಲೆ ಅಂಗಡಿಯಲ್ಲಿ ನಡೆದ ಪರಿಶೀಲನೆ ವೇಳೆ, ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಪ್ರದರ್ಶಿಸಲಾಗಿದೆ.
ಈ ಪಟ್ಟಿಯಲ್ಲಿ ಇರುವವರನ್ನು ಗುರುತಿಸಿ, ಅವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲಿಸಿ, ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.
ಅನರ್ಹ ಕಾರ್ಡ್ ಎಂದು ತಿಳಿದು ಬಂದರೆ ಅಂತಹ ಕಾರ್ಡ್ಗಳನ್ನೂ ರದ್ದು ಮತ್ತು ದಂಡ ವಿಧಿಸಲಾಗುತ್ತದೆ. ಇದೇ ರೀತಿ ರಾಜ್ಯದ ಎಲ್ಲಾ ಕಡೆ ಅನರ್ಹ ಕಾರ್ಡ್‌ಗಳ ಪತ್ತೆ ಮತ್ತು ರದ್ದತಿ ಕಾರ್ಯ ಮುಂದುವರೆದಿದೆ.
ಕೇಂದ್ರ ಸರ್ಕಾರವೇ ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವಂತೆ ಸೂಚನೆ ನೀಡಿದೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಕೂಡ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ 12,00,000ಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 1.೭ ಕೋಟಿಗೂ ಹೆಚ್ಚು ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಈ ಪೈಕಿ 12 ಲಕ್ಷ ಬಿಪಿಎಲ್ ಕಾರ್ಡುಗಳು ಅನರ್ಹರ ಬಳಿಯಿವೆ ಎಂದು ತಿಳಿದುಬಂದಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳು ನಕಲಿ ದಾಖಲೆ ಸೃಷ್ಟಿಸಿ ಬಿಪಿಎಲ್ ಕಾರ್ಡು ಪಡೆದಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ ಹೊರ ರಾಜ್ಯದಿಂದ ಬಂದು ಇಲ್ಲಿ ಪಡಿತರ ಚೀಟಿ ಪಡೆದವರ ಸಂಖ್ಯೆ 57,864 ಎನ್ನುವ ಅಚ್ಚರಿ ಸಂಗತಿ ಹೊರಬಿದ್ದಿದೆ.
ಅನರ್ಹ ಬಿಪಿಎಲ್ ಕಾರ್ಡ್‌ಗಳ ವಿವರ
- ಸತ್ತವರ (ಮೃತಪಟ್ಟವರ ) ಹೆಸರನ್ನು ಪಡಿತರ ಚೀಟಿಯಿಂದದ ತೆಗೆಸದೇ ಇರುವವರು - 1578
- ಬೇರೆ ರಾಜ್ಯದ ಜನರ ಪಡಿತರ ಚೀಟಿ - 77,864
- 25 ಲಕ್ಷ ರೂಪಾಯಿ ಮೇಲಿನ ಜಿಎಸ್ಟಿ ವ್ಯವಹಾರ - 1,684
- 7.5 ಹೆಕ್ಟೇರ್‌ಗೂ ಅಧಿಕ ಪ್ರಮಾಣದ ಜಮೀನು ಹೊಂದಿರುವವರು - 31,456
- ಇ-ಕೆವೈಸಿ ಮಾಡಿಸದೆ ಇರುವವರು - 6,17,196
- ಕಳೆದ ಕೆಲ ತಿಂಗಳುಗಳಿಂದ ಪಡೆಯತರ ಪಡೆಯದವರ ಸಂಖ್ಯೆ - 19,893
ಯಾರೆಲ್ಲಾ ಬಿಪಿಎಲ್ ಕಾರ್ಡ್‌ಗೆ ಅನರ್ಹರು
- ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಗಿಂತ ಹೆಚ್ಚಿರುವವರು
- ವೈಟ್ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಉಳ್ಳವರು
- ಆದಾಯ ತೆರಿಗೆ ಪಾವತಿಸುವವರು
- 3 ಹೆಕ್ಟೇರ್‌ಗೂ ಅಧಿಕ ಭೂಮಿ ಹೊಂದಿರುವವರು
- ನಗರ ಪ್ರದೇಶಗಳಲ್ಲಿ1,000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು
- ಸರ್ಕಾರಿ, ದೊಡ್ಡ ಕಂಪನಿಗಳಲ್ಲಿಕೆಲಸದಲ್ಲಿರುವವರು
ನಿಮ್ಮ ಪಡಿತರ ಚೀಟಿ ರದ್ದಾಗಿದೆ ಅಥವಾ ಇಲ್ಲ ಅನ್ನೋದನ್ನು ತಿಳಿಯಲು ಆಹಾರ ದ ಮುಖ್ಯ ವೆಬ್ಸೈಟ್ ನ ಭೇಟಿ ನೀಡಿ ನಿಮ್ಮ ಪಡಿತರ ಚೀಟಿಯ ಮಾಹಿತಿಯನ್ನು ಕೊಟ್ಟು ಸ್ಥಿತಿಯನ್ನು ತಿಳಿಯಬಹುದು ಅಥವಾ ನಿಮ್ಮ ಹತ್ತಿರದ ಕರ್ನಾಟಕ ಒನ್ ,ಬೆಂಗಳೂರು ಒನ್ ಅಥವಾ ಆನ್ಲೈನ್ ಸೆಂಟರ್ ದಲ್ಲಿ ಮಾಹಿತಿಯನ್ನು ಪಡೆಯಬಹುದು
ಅದೇ ರೀತಿ ಪಡಿತರ ಚೀಟಿಗಳ ತಿದ್ದುಪಡಿ ಸಹ ಪ್ರಾರಂಭವಾಗಿರುತ್ತದೆ ಆದಕಾರಣ ತಾವುಗಳು ತಮ್ಮ ಪಡಿತರ ಚೀಟಿಗಳ ತಿದ್ದುಪಡಿಗಳನ್ನು ಸಹ ಮಾಡಿಸಬಹುದು
ಏನೆಲ್ಲಾ ತಿದ್ದುಪಡಿ ಮಾಡಬಹುದು
ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು
ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಲು ಸದಸ್ಯರ ಆಧಾರ ಕಾರ್ಡ್ ಮತ್ತು ಸದಸ್ಯರ ಜಾತಿ ಮತ್ತು ಆದಾಯ 6 ವರ್ಷ ಮೆಲ್ಪಟ್ಟವರಿಗೆ ಮತ್ತು ಜನನ ಪ್ರಮಾಣ ಪತ್ರ 6 ವರ್ಷದ ಒಳಗಿನ ಮಕ್ಕಳಿಗೆ ಬೇಕಾಗುತ್ತದೆ
tags
#rationcard #rationcardstatuscheck #rationcard #rationcardgeneratedbysdo #rationcardekycprocess #rationcardstatus2025 #rationcardkyc #rationcardmeaadharnumberkaisesudhare #rationcardunitkaisecheckkare #rationcardekyc #rationcardnews #rationcardekycinandhrapradesh #rationcardmedia #rationcardstatuscheckwithaadharnumber #rationcardapply #rationcarddownload #rationcardupdate #rationcardstatus #rationcardnumber #rationcarddigitization-up.nic.in #rationcardtransfer #rationcardap #rationcardand #rationcardandhrapradesh #rationcardandaadharcardlinkprocess #rationcardandaadharlink #rationcardandmobilenumberlink #rationcardandhra #rationcardandaadharlinkinwestbengal #rationcardandmemberpersonaldetails #rationcardandaadharcardkyc #rationcardandbankaccountlink #rationcardandhrakepapad #rationcardandhrakikhichdi #rationcardandhrapradeshlastdate #rationcardandphonenumberlink #rationcardandaadharcardlinkprocessinassam