ಭಾಷೆಯ ಉಗಮ ಮತ್ತು ಅದರ ಸಿದ್ಧಾಂತಗಳ ಬಗ್ಗೆ ತಿಳಿಯೋಣ ಬನ್ನಿ Meaning and Origin of Language

ಎಲ್ಲರಿಗು ನಮ್ಮ ಸರಳ ಒನ್ ತಂಡದಿಂದ ನಮಸ್ಕಾರಗಳು ಇವತ್ತಿನ ಈ ಬ್ಲಾಗ್ ದಲ್ಲಿ ತಮಗೆ ಬಾಷೆಯ ಉಗಮ ಮತ್ತು ಅದರ ಸಿದ್ಧಾಂತ ಗಳ ಮತ್ತು ಅದಕ್ಕೆ ಸಂಬಂದಿಸಿದ ಪ್ರಶ್ನೆಗಳನ್ನೂ ಕೊಡಲಾಗಿದೆ ಅದಕ್ಕೆ ತಾವುಗಳು ಉತ್ತರಗಳನ್ನು ಕಂಡು ಕೊಳ್ಳಬೇಕಾಗಿದೆ 




ಭಾಷೆಯ ಉಗಮ ಮತ್ತು ವಿಕಾಸ :

ಭಾಷಾ ಪ್ರಪಂಚದಲ್ಲಿ ಪ್ರಾಚೀನ ಭಾಷೆ ಯಾವುದು? ಮೂಲ ಭಾಷೆ ಯಾವುದು? ಅದು ಎಂದು ಉದಯವಾಯಿತು? ಹೇಗೆ ಉದಯವಾಯಿತು ? ನಂತರ ಯಾವ ಭಾಷೆ ಬಂದಿತು ? ಎಂದು ಹೇಳಲು ಸಾಧ್ಯವಿಲ್ಲ.

ಫ್ರಾನ್ಸಿನ ಭಾಷಾ ಪರಿಷತ್ತು 1866 ರಷ್ಟು ಹಿಂದೆಯೇ ಭಾಷೆಯ ಉಗಮವನ್ನು ಕುರಿತು ಯಾವುದೇ ರೀತಿಯ ಚರ್ಚೆಗಳನ್ನು ಮಾಡಬಾರದು, ವಾದಗಳನ್ನು ಮಂಡಿಸಬಾರದು ಎಂಬ ನಿಷೇಧ ಮಾಡಿದರೆ ಅಭಿಪ್ರಾಯಗಳನ್ನು ಉಳಿಸಿಕೊಳ್ಳಬಹುದು.

ಭಾಷೆಯಂತಹ ವ್ಯವಸ್ಥೆ ಹೇಗೆ ಉದಯವಾಯಿತು, ಅದರ ಹಿನ್ನೆಲೆಯೇನು, ಅದರ ವಿಕಾಸ ಹೇಗಾಯಿತು ಎಂಬ ಬಗ್ಗೆ ವಿದ್ವಾಂಸರು ಸಿದ್ಧಾಂತಗಳನ್ನು ಮಂಡಿಸಿದ್ದಾರೆ.

ಭಾಷೆಯ ಉಪಯೋಗ ಸಂಶೋಧನೆ ಎಷ್ಟು ಅದ್ಭುತ ಹಾಗೂ ಮಹತ್ವಪೂರ್ಣವಾ ದದ್ದು ಇಡೀ ಮಾನವ ಪ್ರಪಂಚದಲ್ಲಿಯೇ ಯಾವುದೂ ಇಲ್ಲವೆಂದು ವಿಕಾಸವಾದದ ಜನಕ ಚಾಲ್ಸ್ ಡಾರ್ವಿನ್ ಹೇಳಿದ್ದಾರೆ.

ಕಾಂಡಿಲಾಕ್ :

ಮನುಷ್ಯನು ತನ್ನ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಧ್ವನಿ ಹೊರಟು ಭಾಷೆ ಸೃಷ್ಟಿಯಾಯಿತು ಎಂದು ಅಭಿಪ್ರಾಯಪಟ್ಟನು. (ಆದರೆ ಅವನು ಭಾಷೆ ಯಾರಿಂದ ಹುಟ್ಟಿದ್ದು ಎಲ್ಲಿ ಹುಟ್ಟಿದ್ದು ಎಂಬುದನ್ನು ಹೇಳುವುದರಲ್ಲಿ ವಿಫಲನಾದ)

ವಿ.ಜಿ. ವಿ. ಹರ್ಡರ್ :

ಭಾಷೆ ಮಾನವನಿರ್ಮಿತ ಎಂದು ಹೇಳಿದ್ದಾರೆ.

ಆರ್ಡರ್, ರೂಸೋ, ಕಾಂಡಿಲಾಕ್, ಡಾರ್ವಿನ್, ಮ್ಯಾಕ್ಸ್ ಮಿಲ್ಲರ್, ಸ್ಪೆನ್ಸರ್, ಟೇಲರ್, ಹಂಬೋಲ್ಟ್ ಮುಂತಾದವರು ಭಾಷೆಯ ಉಗಮದ ಬಗ್ಗೆ ಅನೇಕ ಸಿದ್ಧಾಂತಗಳನ್ನು ಮಂಡಿಸಿದ್ದಾರೆ.

ಭಾಷೆಯ ಉಗಮದ ಸಿದ್ಧಾಂತಗಳು :

1. ದೈವ ಮೂಲ ಸಿದ್ಧಾಂತ :

ಭಾರತೀಯರ ವಾದ : ಭಾರತೀಯರು ಸಂಸ್ಕೃತ ಭಾಷೆಯನ್ನು ದೇವರ ಭಾಷೆ ಎಂದೇ ನಂಬಿದ್ದರು. ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿಯೂ ಭಾಷೆಯನ್ನು ವಾಗ್ಗೇವತೆ ಎಂದು ಕರೆದು ಭಾಷೆಗೆ ಸ್ಥಾನ ಕೊಡಲಾಗಿದೆ .

ಭಟ್ಟಾಕಳಂಕನ ವಾದ: 

ಭಟ್ಟಾಕಳಂಕನು

ಜಗತ್ತಿನ ಭಾಷೆಗಳೆಲ್ಲ ದೇವರಿಂದಲೇ ಹುಟ್ಟಿವೆ ಎಂದು ವಾದಿಸಿದ್ದಾನೆ.

ಪ್ಲೇಟೋ ವಾದ:

 ಪ್ಲೇಟೋ ಭಾಷೆ ಪ್ರಕೃತಿ ದತ್ತವಾದದ್ದು ಎಂದು ವಾದಿಸಿದ್ದಾನೆ.

2. ಅನುಕರಣ ಸಿದ್ಧಾಂತ :

(Immitative theory)

ಅನುಕರಣೆ ಮಾನವನ ಸಹಜ ಪ್ರವೃತ್ತಿ. ಅನುಕರಣೆಯಿಂದ ಮಾನವ ಏನನ್ನು ಬೇಕಾದರೂ ಕಲಿಯಬಲ್ಲ.ಜನಿಸಿದ ಮಗುವು ತನ್ನ ತಾಯಿ-ತಂದೆಯರ ನೆರೆಹೊರೆಯರ ತನ್ನ ಪರಿಸರದಲ್ಲಿರುವ ಪ್ರಾಣಿ-ಪಕ್ಷಿಗಳ ಚಲನವಲನ ಮತ್ತು ಮಾತನ್ನು ಸ್ವಾಭಾವಿಕವಾಗಿ ಅನುಕರಣೆ ಮಾಡುತ್ತದೆ.

ಲೆಬ್ರಿಜ್ ಎಂಬ ಭಾಷಾ ವಿಜ್ಞಾನಿಯೂ ಈ ವಾದವನ್ನು ಪ್ರತಿಪಾದಿಸುತ್ತಾನೆ.ಕಾಕಾ ಎನ್ನುವುದು, ಸಂಸ್ಕೃತದ ಕಾಕವೂ, ಕನ್ನಡದ ಕಾಗೆಯು, ಇಂಗ್ಲಿಷ್‌ನ CROW ಶಬ್ದಗಳು ಹುಟ್ಟಿಕೊಂಡವು.ಇದನ್ನು ಇಂಗ್ಲಿಷಲ್ಲಿ Bow - WoW theory ಎಂದು ಕರೆಯುತ್ತಾರೆ.ಮ್ಯಾಕ್ಸ್ ಮುಲ್ಲರ್ ಈ ವಾದವನ್ನು ಆಕ್ಷೇಪಿಸಿ ಅನುಕರಣ ಸಿದ್ಧಾಂತವನ್ನು ಬೌ ಬೌ ವಾದ ಎಂದು ಕರೆದಿದ್ದಾನೆ

3. ಉದ್ಗಾರವಾಚಕ ತತ್ವ :

(Interjectional Theory) Pooh-pooh theory.

ಸಂತೋಷ, ಕಷ್ಟ, ಸುಖದಂತಹ ಅತೀ ತೀಕ್ಷ್ಮವಾದ ಸಂವೇದನೆಯ ಉದ್ಗಾರವೇ ಭಾಷೆ. ಆದಿಮಾನವನು ನನ್ನ ಭಾವನೆಗಳನ್ನು ಉದ್ದೇಶಪೂರ್ವಕ ಅಥವಾ ಅಪ್ರಯತ್ನಪೂ ರ್ವಕವಾಗಿ ಪ್ರಕಟಿಸುತ್ತಿದ್ದ ಶಬ್ದಗಳೇ ಭಾಷೆಗಳ ಆಗಿರಬಹುದು.ಮ್ಯಾಕ್ಸ್ ಮುಲ್ಲರ್ ಉದ್ಗಾರವಾಚಕ ತತ್ವವನ್ನು ಪೋಹ್ ಪೋಹ್ ವಾದ ಎಂದು ಕರೆದಿದ್ದಾನೆ.

4. ಶ್ರಮ ಪರಿಹಾರ ಸಿದ್ಧಾಂತ :

ಆದಿ ಮಾನವನು ಶ್ರಮಪೂರ್ಣ ಕೆಲಸ ಮಾಡುವಾಗ ತನ್ನ ಶ್ರಮ ಪರಿಹಾರಾ ರ್ಥವಾಗಿ ಹೊರಡಿಸುವ ನಿಟ್ಟುಸಿರು ವಿಭಿನ್ನ ರೀತಿಯ ಒತ್ತಡಗಳಿಂದ ಬಾಯಿಯ ಮೂಲಕ ಹೊರ ಬರುತ್ತಿತ್ತು. ಈ ರೀತಿ ಹೊರಟ ಉಸಿರು ಬೇರೆ ಬೇರೆ ರೀತಿಯ ಧ್ವನಿಗಳಾಗಿ ಶಬ್ದಗಳಾಗಿ ಭಾಷೆಯಾಗಿ ರೂಪಿಸಲ್ಪಟ್ಟಿದೆ ಎಂಬುದೇ ಈ ವಾದದ ತಿರುಳು.

ಉದಾ:ಆಹ್, ಉಶ್, ಅಬ್ಬಾ, ಹೂಂ

ಈ ಸಿದ್ಧಾಂತದ ಪ್ರತಿಪಾದಕ :ನೊಯಿರಿ (Noire)ಯೋ- ಹೇ- ಹೋ- ವಾದ ಎಂದು ಕರೆದಿದ್ದಾನೆ.

5. ನಾದ ಸಿದ್ಧಾಂತ :

ವಸ್ತುಗಳ ಕಂಪನದಿಂದ ಹೊರಡುವ ಶಬ್ದಗಳು ಪ್ರಾಣಿ-ಪಕ್ಷಿಗಳು ಹೊರಡಿಸುವ ಶಬ್ದಗಳು ಪ್ರಕೃತಿಯಲ್ಲಿ ಮೂಡಿಬರುವ ಶಬ್ದಗಳು ಸ್ವಾಭಾವಿಕ ಕ್ರಿಯೆಗಳಾಗಿವೆ.

ಪ್ರಪಂಚದ ಪ್ರತಿಯೊಂದು ವಸ್ತುವಿಗೂ ತನ್ನದೇ ಆದಒಂದು ನಾದವಿದೆ ಇಂತಹ ನಾದ ಅಥವಾ ಶಬ್ದವನ್ನುಅನುಸರಿಸಿ ಭಾಷೆ ಉಗಮವಾಗಿದೆ. ಪ್ಲೇಟೋ ಈಸಿದ್ಧಾಂತವನ್ನು ಮೊದಲು ಜಾರಿಗೆ ತಂದನು.ಮ್ಯಾಕ್ಸ್ ಮುಲ್ಲರ್ಸಿದ್ದಾಂತವನ್ನು ಪ್ರತಿಪಾದಿಸಿದನು.ಇದನ್ನು ಡಿಂಗ್ ಡಾಂಗ್ ಸಿದ್ಧಾಂತ ಎಂದು ಕರೆಯುತ್ತಾರೆ.ವಿದ್ವಾಂಸರು ಈ ಸಿದ್ಧಾಂತ ಸಮಂಜಸವಾಗಿಲ್ಲ ಹಾಗೂ ಇದೊಂದು ಸುಳ್ಳು ಸಿದ್ಧಾಂತ ಎಂದು ಹೆಸರಿಸಿದ್ದಾರೆ.

6. ಸಂಜ್ಞಾ ಭಾಷಾವಾದ :

ಭಾಷೆ ಬಳಕೆಗೆ ಬರುವುದಕ್ಕೆ ಮೊದಲು ಸನ್ನೆಗಳು ಬಳಕೆಯಲ್ಲಿದ್ದು ಮಾನವರು ಕೈ-ಬಾಯಿ ಮುಖ ಹಾಗೂ ಕಣ್ಣುಗಳ ಸಂಜ್ಞೆಯಿಂದಲೇ ಭಾವನೆಗಳನ್ನು ಇತರರಿಗೆ ತಿಳಿಸುತ್ತಿದ್ದರು.

ಸಿದ್ಧಾಂತದ ಪ್ರತಿಪಾದಕ : ವೂಂಟ್

7 ತೊದಲ್ನುಡಿ ವಾದ :

ಜನಿಸಿದ ಮಗು ನಾಲ್ಕಾರು ತಿಂಗಳುಗಳ ನಂತರ ತನಗೆ ಕೇಳುವ ಕಾಣುವ ಕ್ರಿಯೆ ಮಾತನ್ನು ಅನುಕರಣೆ ಮಾಡುತ್ತದೆ. ತಾಯಿಯಾಗು ಇತರರ ಮಾತುಗಳನ್ನು ಆಲಿಸುತ್ತಾ ಅನುಕರಿಸುವ ಮಗು ಅಸ್ಪಷ್ಟವಾಗಿ ತೊದಲುತ್ತಾ ಕ್ರಮೇಣ ನಿರ್ದಿಷ್ಟ ಸ್ಪಷ್ಟ ಶುದ್ಧ ಹಾಗೂ ಭಾವಪೂರ್ಣ ಮಾತುಗಳಾಗುತ್ತವೆ ಎಂಬುದೇ ಈ ವಾದ.

ಈ ವಾದದ ಪ್ರತಿಪಾದಕ :ಯಸ್ಪರ್ಶನ್

8ಸಂಪರ್ಕ ಸಿದ್ಧಾಂತ :

ಮಾನವನು ತನ್ನ ಸಾಮಾಜಿಕ ಸಂಪರ್ಕಕ್ಕಾಗಿ ಭಾಷೆಯನ್ನು ರೂಪಿಸಿಕೊಂಡರು ಎಂಬುದನ್ನು ಸಂಪರ್ಕ ಸಿದ್ದಾಂತ ಪ್ರತಿಪಾದಿಸುತ್ತದೆ.

ಈ ಸಿದ್ಧಾಂತದ ಪ್ರತಿಪಾದಕ ರಿವೇಜ್





9 ವಂಶವೃಕ್ಷ ಸಿದ್ಧಾಂತ :

ಇಂದು ಜಗತ್ತಿನಲ್ಲಿ ಸುಮಾರು 6 ಸಾವಿರ ಭಾಷೆಗಳು ಇವೆ ಎಂದು ಭಾಷಾ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಭಾಷೆಗಳಿಗೆ ಎಲ್ಲಾ ಮೂಲ ಭಾಷೆ ಯಾವುದು ? ಒಂದು ಭಾಷೆಯಿಂದ ಎಲ್ಲಾ ಭಾಷೆಗಳಲ್ಲಿ ಉದಯವಾದವೆ? ಈ ಭಾಷೆಗಳೆಲ್ಲಾ ಒಮ್ಮೆಲೆ ಹುಟ್ಟಿಬಂದಿವೆಯಾ ಎಂಬ ಪ್ರಶ್ನೆಗಳು ಭಾಷೆಯ ಉಗಮ ಮತ್ತು ವಿಕಾಸದ ಮೇಲೆ ಬೆಳಕು ಚೆಲ್ಲುತ್ತವೆ.

ಭಾಷಾ ಪ್ರಪಂಚವನ್ನು ಒಂದು ಮಹಾವೃಕ್ಷ ಕ್ಕೆ ಹೋಲಿಸಿದರೆ ಮರ ಪುಟ್ಟದಾಗಿ ಹುಟ್ಟಿ ಬೆಳೆಯುತ್ತಾ ಸಾವಿರಾರು ರಂಬೆಗಳಾಗಿ ಕವಲೊಡೆದು ಹೆಮ್ಮರವಾಗಿ ಇರುವಂತೆ ಆರಂಭದಲ್ಲಿ ಒಂದೇ ಭಾಷೆ ಇದ್ದು ಕ್ರಮೇಣ ಮಾನವಸಮಾಜ ವಿಕಾಸವಾದಂತೆ ಈ ಭಾಷೆಯು ವಿವಿಧ ಭಾಷೆಗಳಾಗಿ ಕವಲೊಡೆದು ವಿಕಾಸವಾಗಿದೆ ಎಂಬುದೇ ವಂಶವೃಕ್ಷ ಸಿದ್ಧಾಂತ.

ಸಿದ್ಧಾಂತದ ಪ್ರತಿಪಾದಕ : ಫೀಷರ್

10 ತರಂಗ ಸಿದ್ಧಾಂತ :

ಶಾಂತವಾಗಿರುವ ಒಂದು ಕೊಳದ ನೀರಿಗೆ ಕಲ್ಲನ್ನು ಎಸೆದಾಗ ನಿರಂತರವಾಗಿ ಸಾವಿರಾರು ತರಂಗಗಳು ಮೂಡುವಂತೆ ಒಂದೇ ಭಾಷೆಯ ಅನೇಕ ಭಾಷೆ ಮತ್ತು ಉಪಭಾಷೆಗಳು ಆಗಿ ವಿಕಾಸಗೊಂಡಿದೆ ಎಂಬುದೇ ತರಂಗ ಸಿದ್ದಾಂತ.

ತರಂಗ ಸಿದ್ಧಾಂತದ ಪ್ರತಿಪಾದಕ :

ಜೋಹಾನ್ಸಷಿ

1. ಮನುಷ್ಯನು ತನ್ನ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಧ್ವನಿ ವರದಿಯಾಯಿತು ಎಂದು ಅಭಿಪ್ರಾಯ ಪಟ್ಟವರು ಯಾರು ?

ಎ. ಚಾರ್ಲ್ಸ್ ಡಾರ್ವಿನ್

ಬಿ. ಕಾಂಡಿಲಾಕ್

ಸಿ. ವಿ. ಜಿ. ವಿ. ಆರ್ಡರ್

ಡಿ. ಹಂಬೋಲ್ಟ್

2. ಭಾಷೆ ಪ್ರಕೃತಿದತ್ತವಾದದ್ದು ಎಂದು ವಾದಿಸಿದವನು

ಎ. ಪ್ಲೇಟೋ

ಬಿ. ರೂಸೋ

ಸಿ. ಮ್ಯಾಕ್ಸ್ ಮುಲ್ಲರ್

ಡಿ. ಸ್ಪೆನ್ಸರ್

3. ಜಗತ್ತಿನ ಭಾಷೆಗಳೆಲ್ಲ ದೇವರಿಂದಲೇ ಹುಟ್ಟಿವೆ ಎಂದು ವಾದಿಸಿದವನು

ಎ. ಫ್ರೆಡ್ರಿಕ್

ಬಿ. ಮ್ಯಾಕ್ಸ್ ಮುಲ್ಲರ್

ಸಿ. ಅರಿಸ್ಟಾಟಲ್

ಡಿ. ಭಟ್ಟಾಕಳಂಕ

4. ಅನುಕರಣ ಸಿದ್ಧಾಂತದ ಪ್ರತಿಪಾದಕ ಇವನಾಗಿದ್ದಾನೆ

ಎ. ಲೆಬ್ರಿಜ್

ಬಿ. ನಾಯಿರಿ

ಸಿ. ಮ್ಯಾಕ್ಸ್ ಮುಲ್ಲರ್

ಡಿ. ದಂಡಿ

5. ಮಾನವನು ವಸ್ತುಗಳ ಮತ್ತು ಪ್ರಾಣಿಗಳ ಶಬ್ದಗಳನ್ನು ಅನುಕರಿಸಲು ಮಾಡಿದ ಪ್ರಯತ್ನವೇ ಭಾಷೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಎ. ಚಾರ್ಲ್ಸ್ ಡಾರ್ವಿನ್

ಬಿ. ಹಂಬೋಲ್ಟ್

ಸಿ. ಲೆಬ್ರಿಜ್

ಡಿ. ಸ್ಪೆನ್ಸರ್

6. ಅನುಕರಣ ಸಿದ್ಧಾಂತವನ್ನು ಬೌ ಬೌ ವಾದ ಎಂದು ಕರೆದವರು ಯಾರು ?

ಎ. ಮ್ಯಾಕ್ಸ್ ಮುಲ್ಲರ್

ಬಿ. ಜೋಹಾನ್ಸಷಿ

ಸಿ. ಪ್ಲೇಷರ್

ಡಿ. ರಿವೇಜ್

7. ಮ್ಯಾಕ್ಸ್ ಮುಲ್ಲರ್ ಅನ್ನು ಈ ಕೆಳಗಿನ ಯಾವ ಸಿದ್ಧಾಂತವನ್ನು ಪೋಹ್ ಪೋಹ್ ವಾದ ಎಂದು ಕರೆದಿದ್ದಾನೆ.

ಎ. ಅನುಕರಣ ಸಿದ್ದಾಂತ

ಬಿ. ಅನುರಣನ ಸಿದ್ಧಾಂತ

ಸಿ. ಶ್ರಮ ಪರಿಹಾರ ಸಿದ್ದಾಂತ

ಡಿ. ಉದ್ಧಾರವಾಚಕ ಸಿದ್ದಾಂತ

8. ಶ್ರಮ ಪರಿಹಾರ ಸಿದ್ಧಾಂತದ ಪ್ರತಿಪಾದಕ ಯಾರು ?

ಎ. ಮ್ಯಾಕ್ಸ್ ಮುಲ್ಲರ್

ಬಿ. ವೊಂಟ್

ಸಿ. ನೊಯಿರಿ

ಡಿ. ಯಸ್ಪರ್ಶನ್

9. ಯೋ- ಹೇ- ಹೋ- ವಾದದ ಪ್ರತಿಪಾದಕರು ಯಾರು ?

ಎ. ಯಸ್ಪರ್ಶನ್

ಬಿ. ರಿವೇಜ್

ಸಿ. ನೋಯಿರಿ

ಡಿ. ಜೋಹಾನ್ಸಷಿ

10. ತರಂಗ ಸಿದ್ಧಾಂತದ ಪ್ರತಿಪಾದಕರು ಇವರಾಗಿದ್ದಾರೆ

ಎ. ಜೋಹಾನ್ಸಷಿ

ಬಿ. ಪ್ಲೇಷರ್

ಸಿ. ರಿವೇಜ್

ಡಿ. ವೂಂಟ್

11. ಮ್ಯಾಕ್ಸ್ ಮುಲ್ಲರ್ ಅನ್ನು ಈ ಕೆಳಗಿನ ಯಾವ ಸಿದ್ಧಾಂತವನ್ನು ಡಿಂಗ್ ಡಾಂಗ್ ಸಿದ್ಧಾಂತ ಎಂದು ಕರೆದಿದ್ದಾನೆ ?

ಎ. ಶ್ರಮ ಪರಿಹಾರ ಸಿದ್ದಾಂತ

ಬಿ. ನಾದ ಸಿದ್ದಾಂತ

ಸಿ. ಸಂಪರ್ಕ ಸಿದ್ಧಾಂತ

ಡಿ. ವಂಶವೃಕ್ಷ ಸಿದ್ಧಾಂತ

12. ಸಂಜ್ಞಾಭಾಷವಾದ ಸಿದ್ದಾಂತದ ಪ್ರತಿಪಾದಕ ಯಾರು ?

ಎ. ಯಸ್ಪರ್ಶನ್

ಬಿ. ವೂಂಟ್

ಸಿ. ರಿವೇಜ್

ಡಿ. ಪ್ಲೇಷರ್

13. ವಂಶವೃಕ್ಷ ಸಿದ್ಧಾಂತದ ಪ್ರತಿಪಾದಕ ಯಾರು ?

ಎ. ಯಸ್ಪರ್ಶನ್

ಬಿ. ರಿವೇಜ್

ಸಿ. ಜೋಹಾನ್ಸಷಿ

ಡಿ. ಪ್ಲೇಷರ್

14. ತರಂಗ ಸಿದ್ಧಾಂತ ಪ್ರತಿಪಾದಕ ಯಾರು?

ಎ. ಜೋಹಾನ್ಸಷಿ

ಬಿ. ರಿವೇಜ್

ಸಿ. ಯಸ್ಪರ್ಶನ್

ಡಿ. ವೊಂಟ್

15. ಸಂಪರ್ಕ ಸಿದ್ಧಾಂತದ ಪ್ರತಿಪಾದಕ

ಎ. ಫೆಷರ್

ಬಿ. ರಿವೇಜ್

ಸಿ. ನೋಯಿರಿ

ಡಿ. ಯಸ್ಪರ್ಶನ್



WhatsApp Group Join Now
Telegram Group Join Now
Previous Post Next Post