ಹಾಯ ಎಲ್ಲರಿಗೂ ನಮ್ಮ ಸರಳ ಒನ್ ತಂಡದಿಂದ ತಮಗೆ ಆತ್ಮಿಯ ಸ್ವಾಗತ್ ,ಇವತ್ತಿನ ಈ ಬ್ಲಾಗ್ ದಲ್ಲಿ ನಾವು ನಿಮಗೆ ಕರ್ನಾಟಕ ರಾಜ್ಯದ ಎಲ್ಲ ಕ್ಷೇತ್ರದ ಸ್ವಲ್ಪ ಮಟ್ಟಗೆ ಮಾಹಿತಿ ಯನ್ನು ಕಲೆ ಹಾಕಿ ನಿಮಗೆ ಉಪಯುಕ್ತ ಆಗುತ್ತೆ ಎಂದು ಆಶಿಶುತ್ತೇವೆ ,
ಕರ್ನಾಟಕ ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ,








1956 ರಲ್ಲಿ ಕರ್ನಾಟಕ ರಾಜ್ಯವನ್ನು ಫಜಲ್ ಅಲಿ ಆಯೋಗದ ಶಿಫಾರಸಿನ ಮೇರೆಗೆ ರಚಿಸಲಾಗಿತ್ತು,
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ವಾದ ವರ್ಷ
1973 ನಂಬರ್ 1
( ಪ್ರತಿವರ್ಷ ನವೆಂಬರ್ 1ನ್ನು ಕರ್ನಾಟಕ ರಾಜ್ಯೋತ್ಸವ ದಿನ ಎಂದು ಆಚರಿಸಲಾಗುತ್ತದೆ)
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ, ಡಿ ದೇವರಾಜ ಅರಸ್ ,
ಕರ್ನಾಟಕವು 1956 ನಂಬರ್ 1 ರಂದು ಏಕೀಕರಣವಾಯಿತು
ಎಸ್ ನಿಜಲಿಂಗಪ್ಪ ರವರು ಏಕೀಕರಣದ ನಂತರ ಕರ್ನಾಟಕದ ಮೊದಲ ಮುಖ್ಯಮಂತ್ರಿ ಆಗಿದ್ದರು ,
ಕೆ ಸಿ ರೆಡ್ಡಿ ಅವರು ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದರು ,
ಡಿ ದೇವರಾಜ ಅರಸರು ಕರ್ನಾಟಕದ ಮೊದಲ ಹಿಂದುಳಿದ ಮುಖ್ಯಮಂತ್ರಿ ,
ಕರ್ನಾಟಕದಲ್ಲಿ ಒಟ್ಟು 30 ಜಿಲ್ಲೆಗಳು ಇವೆ ,
( ಇತ್ತೀಚಿಗೆ *ವಿಜಯನಗರವನ್ನು** 31ನೇ ಜಿಲ್ಲೆಯನ್ನಾಗಿ ಮಾಡಲಾಗಿದೆ.
PSI(RSI)-2020
ಕರ್ನಾಟಕ ರಾಜ್ಯದಲ್ಲಿ ನಾಲ್ಕು ಕಂದಾಯ ವಿಭಾಗಗಳಿವೆ.( 1 ಬೆಂಗಳೂರು, 2 ಮೈಸೂರು, 3 ಬೆಳಗಾವಿ, 4 ಕಲಬುರ್ಗಿ ,)
ಕರ್ನಾಟಕದ ಒಟ್ಟು ವಿಸ್ತೀರ್ಣ, 1.91.791 ಚದರ ಕಿಲೋಮೀಟರ್ ,
ಕರ್ನಾಟಕದ ಉಕ್ಕಿನ ಮನುಷ್ಯ ಹಳ್ಳಿಕೇರಿ ಗುದ್ಲೆಪ್ಪ
ಕರ್ನಾಟಕದ ಗಡಿನಾಡಿನ ಗಾಂಧಿ= ಉಮೇಶ್ ರಾವ್
ಕರ್ನಾಟಕದ ಭಗತ್ ಸಿಂಗ್= ಮೈಲಾರ್ ಮಹದೇವಪ್ಪ
ಕರ್ನಾಟಕ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ರಾಗಿಯನ್ನು ಬೆಳೆಯುವ ರಾಜ್ಯವಾಗಿದೆ ,
ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ ,
1843 ಜುಲೈ 1
(ಮೊಗ್ಲಿಂಗ್)
ಜಿ ಕೆ ಟೈಯರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ,ಪ್ರತಿಯೊಬ್ಬರಿಗೂ 25000/- ರೂ
ಕನ್ನಡಕ್ಕೆ ಒಟ್ಟು 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ,
( ಪ್ರಥಮ ಜ್ಞಾನಪೀಠ ಕುವೆಂಪು (8ನೇ ಜ್ಞಾನಪೀಠ ಪಡೆದವರ ಚಂದ್ರಶೇಖರ್ ಕಂಬಾರ್ )
ಕರ್ನಾಟಕದ ಅತ್ಯುನ್ನತ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಯಾಗಿದೆ ,
ಶ್ರೀವಿಜಯ ಬರೆದ ಕವಿರಾಜಮಾರ್ಗವು ಕನ್ನಡದ ಮೊದಲ ಕೃತಿಯಾಗಿದೆ ,
ಶಿವಕೋಟ್ಯಾಚಾರ್ಯ ಬರೆದ ವಡ್ಡಾರಾಧನೆ ಕನ್ನಡದ ಮೊದಲ ಗದ್ಯ ಕೃತಿ ಯಾಗಿದೆ ,
ಸಿಂಗಚಾರ್ಯ ಬರೆದ ಮಿತ್ರವಿಂದ ಗೋವಿಂದ ಕನ್ನಡದ ಪ್ರಥಮ ನಾಟಕವಾಗಿದೆ ,
ಅಮರಶಿಲ್ಪಿ ಜಕಣಾಚಾರಿ ಕನ್ನಡದ ಮೊದಲ ವರ್ಣ ಚಿತ್ರವಾಗಿದೆ ,
ಆಲೂರು ವೆಂಕಟರಾಯರು ಕನ್ನಡದ ಕುಲಪುರೋಹಿತ ಎಂದು ಪ್ರಸಿದ್ಧರು
ಕೃಷ್ಣಾ ನದಿಯು ಕರ್ನಾಟಕದಲ್ಲಿ ಅತಿ ಉದ್ದವಾಗಿ ಹರಿಯುವ ನದಿಯಾಗಿದೆ .
ಕದಂಬ ಮನೆತನವು ಕನ್ನಡದ ಮೊದಲ ರಾಜ್ಯ ಮನೆತನ ವಾಗಿದೆ ,
ಕಂದಗಲ್ ಹನುಮಂತರಾಯ ಕನ್ನಡದ ಶೇಕ್ಸ್ಪಿಯರ್ ಎಂದು ಹೆಸರುವಾಸಿಯಾಗಿದ್ದಾರೆ ,
ಕರ್ನಾಟಕದಲ್ಲಿ ಅತಿ ಹೆಚ್ಚು *ಶ್ರೀಗಂಧ ಮರಗಳನ್ನು ಬೆಳೆಯಲಾಗುತ್ತದೆ. ಅದಕ್ಕಾಗಿ ನಮ್ಮ ಕರ್ನಾಟಕ ರಾಜ್ಯವನ್ನು *ಶ್ರೀಗಂಧದ ನಾಡು ಎಂದು ಕರೆಯುತ್ತಾರೆ** ,
ಕರ್ನಾಟಕ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುವ ರಾಜ್ಯವಾಗಿದೆ ,
ಕರ್ನಾಟಕ ರಾಜ್ಯವು ಅತಿ ಹೆಚ್ಚು ರೊಬಸ್ಟ್ ವಿಧದ ಕಾಫಿ ಬೆಳೆಯುತ್ತದೆ ,
ಕರ್ನಾಟಕ ರಾಜ್ಯವು ಅತಿ ಹೆಚ್ಚು ಆನೆಗಳನ್ನು ಹೊಂದಿದ ರಾಜ್ಯವಾಗಿದೆ ,
"ಕೆ.ಎಸ್ ನಾಗರತ್ನಮ್ಮ" ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿದ್ದರು ,
ವಿ ಎಸ್ ರಮಾದೇವಿ ಕರ್ನಾಟಕ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರು
ವಿ ವೆಂಕಟಪ್ಪ ಕರ್ನಾಟಕ ವಿಧಾನಸಭೆಯ ಮೊದಲ ಸ್ಪೀಕರ್ , ,
ಕರ್ನಾಟಕ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ,
ಕರ್ನಾಟಕ ರಾಜ್ಯದಲ್ಲಿ 12 ರಾಜ್ಯಸಭಾ ಸ್ಥಾನಗಳಿವೆ
ಕರ್ನಾಟಕ ರಾಜ್ಯದ ವಿಧಾನಪರಿಷತ್ 75 ಸದಸ್ಯರನ್ನು ಹೊಂದಿದೆ ,
ಕರ್ನಾಟಕ ರಾಜ್ಯದಲ್ಲಿ 2 ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ,
ಕರ್ನಾಟಕ ರಾಜ್ಯದಲ್ಲಿ 5 ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ .
ಕರ್ನಾಟಕ ರಾಜ್ಯದಲ್ಲಿ 34 ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ,
@ ಕರ್ನಾಟಕ ರಾಜ್ಯವು ಭಾರತದಲ್ಲಿಯೇ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ರಾಜ್ಯವಾಗಿದೆ, ಅದಕ್ಕಾಗಿ ನಮ್ಮ ಕರ್ನಾಟಕ ರಾಜ್ಯವನ್ನು ಚಿನ್ನದ ನಾಡು ಎಂದು ಕರೆಯುತ್ತಾರೆ ,
ಪತ್ರಗಳ ಮೂಲಕ ನೆಪೋಲಿಯನ್ ಬೋನಾಪಾರ್ಟಿ ಯೊಂದಿಗೆ ಕರ್ನಾಟಕದ ಅರಸ ಟಿಪ್ಪು ಸುಲ್ತಾನ ಸಂಪರ್ಕ ಇಟ್ಟುಕೊಂಡಿದ್ದನು
ದಸರಾ ಹಬ್ಬವು ಕರ್ನಾಟಕದ ನಾಡಹಬ್ಬವಾಗಿದೆ
ಕರ್ನಾಟಕ ರಾಜ್ಯವು 6 ರಾಜ್ಯಗಳೊಂದಿಗೆ ಭೂ ಗಡಿಯನ್ನು ಹೊಂದಿದೆ
ಆಂಧ್ರ ಪ್ರದೇಶ್ , ತೆಲಂಗಾಣ, ಮಹಾರಾಷ್ಟ್ರ , ಗೋವಾ, *ಕೇರಳ** , ತಮಿಳುನಾಡು ,
ಕನ್ನಡದ 3ರಾಷ್ಟ್ರ ಕವಿಗಳು,
ಮಂಜೇಶ್ವರ ಗೋವಿಂದಪೈ, ಕುವೆಂಪು,
ಜಿ ಎಸ್ ಶಿವರುದ್ರಪ್ಪ ,
ಕರ್ನಾಟಕ ರಾಜ್ಯದಲ್ಲಿ ಕಬ್ಬಿಣ, ತಾಮ್ರ, ಮತ್ತು ಚಿನ್ನ, ಮೂರು ಅದಿರುಗಳು ಸಿಗುತ್ತವೆ ,
ಪಂಪ ಪ್ರಶಸ್ತಿ ಯು ಕರ್ನಾಟಕದಲ್ಲಿ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ ,
"ಚರಕ ಪ್ರಶಸ್ತಿಯು" ಪತ್ರಿಕೋದ್ಯಮಕ್ಕೆ ನೀಡುವ ಪ್ರಶಸ್ತಿಯಾಗಿದೆ ,
"ಶಾಂತಲಾ ಪ್ರಶಸ್ತಿಯನ್ನು" ನೃತ್ಯ ಕ್ಷೇತ್ರಕ್ಕೆ ನೀಡಲಾಗಿದೆ,
"ಕುಮಾರವ್ಯಾಸ" ಪ್ರಶಸ್ತಿಯನ್ನು ಗಮಕ ಕಲೆ ಕ್ಷೇತ್ರಕ್ಕೆ ನೀಡಲಾಗಿದೆ ,
ಕನ್ನಡದ ರತ್ನತ್ರಯರು ಪಂಪ, ರನ್ನ, ಪೊನ್ನ ,
ಕನ್ನಡದ ಕವಿ ಚಕ್ರವರ್ತಿಗಳು ಪಂಪ, ರನ್ನ, ಜನ್ನ,
ಕರ್ನಾಟಕ ರಾಜ್ಯದಲ್ಲಿ ಒಟ್ಟು 7 ಪೊಲೀಸ್ ವಲಯಗಳಿವೆ,
ಕರ್ನಾಟಕದ ಕರಾವಳಿ ಪ್ರದೇಶವನ್ನು ಮ್ಯಾಕರಲ್ ಕರಾವಳಿ ಎಂದು ಕರೆಯುತ್ತಾರೆ ,ಕರ್ನಾಟಕದ ಪ್ರಮುಖ ಪ್ರಶಸ್ತಿಗಳು
ಬಸವಶ್ರೀ ಪ್ರಶಸ್ತಿ - 1997
ನೀಡುವವರು - ಚಿತ್ರದುರ್ಗದ ಮುರುಘಾಮಠ
ಕರ್ನಾಟಕ ರತ್ನ ಪ್ರಶಸ್ತಿ - 1992
ನೀಡುವವರು - ಕರ್ನಾಟಕ ಸರ್ಕಾರ
ಬಸವ ಪುರಸ್ಕಾರ - 2000
ನೀಡುವವರು - ಕರ್ನಾಟಕ ಸರ್ಕಾರ
ಪಂಪ ಪ್ರಶಸ್ತಿ - 1987
ನೀಡುವವರು - ಕರ್ನಾಟಕ ಸರ್ಕಾರ
ನೃಪತುಂಗ ಪ್ರಶಸ್ತಿ - 2007
ನೀಡುವವರು - ಕನ್ನಡ ಸಾಹಿತ್ಯ ಪರಿಷತ್
ಗುಬ್ಬಿ ವೀರಣ್ಣ ಪ್ರಶಸ್ತಿ - 1994
ಕನಕಶ್ರೀ ಪ್ರಶಸ್ತಿ - 2008
ಶಾಂತಲಾ ನಾಟ್ಯ ಪ್ರಶಸ್ತಿ - 1995
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ - 1993ಕರ್ನಾಟಕದ ಪ್ರಮುಖ ಪ್ರಶಸ್ತಿಗಳು
ಬಸವಶ್ರೀ ಪ್ರಶಸ್ತಿ - 1997
ನೀಡುವವರು - ಚಿತ್ರದುರ್ಗದ ಮುರುಘಾಮಠ
ಕರ್ನಾಟಕ ರತ್ನ ಪ್ರಶಸ್ತಿ - 1992
ನೀಡುವವರು - ಕರ್ನಾಟಕ ಸರ್ಕಾರ
ಬಸವ ಪುರಸ್ಕಾರ - 2000
ನೀಡುವವರು - ಕರ್ನಾಟಕ ಸರ್ಕಾರ
ಪಂಪ ಪ್ರಶಸ್ತಿ - 1987
ನೀಡುವವರು - ಕರ್ನಾಟಕ ಸರ್ಕಾರ
ನೃಪತುಂಗ ಪ್ರಶಸ್ತಿ - 2007
ನೀಡುವವರು - ಕನ್ನಡ ಸಾಹಿತ್ಯ ಪರಿಷತ್
ಗುಬ್ಬಿ ವೀರಣ್ಣ ಪ್ರಶಸ್ತಿ - 1994
ಕನಕಶ್ರೀ ಪ್ರಶಸ್ತಿ - 2008
ಶಾಂತಲಾ ನಾಟ್ಯ ಪ್ರಶಸ್ತಿ - 1995
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ - 1993ಕರ್ನಾಟಕದಲ್ಲಿ ಆಚರಿಸುವ ಉತ್ಸವಗಳು






1)
ಮೇಲುಕೋಟೆ= ವೈರಮುಡಿ ಉತ್ಸವ,
2)
ಬನವಾಸಿ= ಕದಂಬೋತ್ಸವ ,
3)
ವಿಜಾಪುರ= ನವರಸಪುರ ಉತ್ಸವ ,
4)
ಬದಾಮಿ= ಚಾಲುಕ್ಯ ಉತ್ಸವ ,
5)
ಹಾಸನ= ಹೊಯ್ಸಳ ಉತ್ಸವ,
6)
ಕೊಪ್ಪಳ= ಆನೆಗುಂದಿ ಉತ್ಸವ ,
7)
ಬೀದರ್ = ಬಸವ ಉತ್ಸವ,
8)
ಮುಧೋಳ= ರನ್ನೋತ್ಸವ
9)
ತಲಕಾವೇರಿ= ತೀರ್ಥೋತ್ಸವ ,
10)
ಚಾಮರಾಜನಗರ= ಜಲಪಾತೋತ್ಸವ ,
11)
ಮೈಸೂರು= ದಸರಾ ಉತ್ಸವ,
12)
ಬೆಂಗಳೂರು= ಕರಗೋತ್ಸವ, / ಗರಗೋತ್ಸವ .
13)
ಬೆಳಗಾವಿ= ಕಿತ್ತೂರು ಉತ್ಸವ .
14)
ಹಂಪಿ= ವಿಜಯೋತ್ಸವ , ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಶ್ನೋತ್ತರಗಳು_





1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು?
ಟಿಪ್ಪು ಸುಲ್ತಾನ್
2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು?
ಜಯಚಾಮರಾಜೇಂದ್ರ ಒಡೆಯರ್
3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ?
24
4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ?
ಕ್ರೀಶ 600
5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ?
ವಿಜಯನಗರ ಸಾಮ್ರಾಜ್ಯ
( ಗಾಂಧೀಜಿ ಅವರು ರಾಮರಾಜ್ಯ ಎಂದು ಕರೆದಿದ್ದಾರೆ)
6) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ?
ಕ್ರೀಶ 1336
7) ವಿಜಯನಗರ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶಕರಾಗಿದ್ದ ಗುರುಗಳು?
ವಿದ್ಯಾರಣ್ಯಗುರುಗಳು
8) ವಿಜಯನಗರ ಸಾಮ್ರಾಜ್ಯದ ಅಂತ್ಯ ಯಾರ ಕಾಲದಲ್ಲಾಯಿತು?
ಅಳಿಯ ರಾಮರಾಯ
9) ವಿಜಯನಗರ ಸಾಮ್ರಾಜ್ಯದ ಅಂತ್ಯ ಹಾಡಿದ ಯುದ್ಧ ಯಾವುದು?
ತಾಳಿಕೋಟಿ ಯುದ್ಧ
10) ಎಲ್ಲೋರದ ಕೈಲಾಸನಾಥ ದೇವಾಲಯವನ್ನು ಕೊರೆಸಿದ ಕನ್ನಡ ದೊರೆ ಯಾರು?
ಒಂದನೇ ಕೃಷ್ಣ
11) ಮೈಸೂರು ರಾಜ್ಯದಲ್ಲಿ ನಾಣ್ಯ ಮುದ್ರಣ ಪ್ರಾರಂಭವಾದದ್ದು ಯಾವಾಗ?
1640
12) ಕೃಷ್ಣದೇವರಾಯನು ಯಾವ ಮನೆತನಕ್ಕೆ ಸೇರಿದವನು?
ತುಳು ಮನೆತನ
13) ಮೈಸೂರು ಅರಸರ ಮೂಲಪುರುಷ ಯಾರು?
ಯದುರಾಯ
14) ಶಿವಾಜಿಯನ್ನು ಶ್ರೀರಂಗಪಟ್ಟಣದ ಯುದ್ಧದಲ್ಲಿ ಸೋಲಿಸಿದ ಮೈಸೂರು ಅರಸ ಯಾರು?
ಚಿಕ್ಕದೇವರಾಜ ಒಡೆಯರ
15) ನವಕೋಟಿ ನಾರಾಯಣ ಎಂಬ ಬಿರುದ್ಧ ಯಾವ ಅರಸನಿಗೆ ಇತ್ತು?
ಚಿಕ್ಕದೇವರಾಜ ಒಡೆಯರು ( ಕಾರಣ " ಅವನ ಖಜಾನೆಯಲ್ಲಿ 9 ಕೋಟಿ ಹಣ ಇದ್ದ ಕಾರಣ)
16) ಗಂಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು?
ದಡಿಗ
17) ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದು?
ಗರುಡ
18) ಕನ್ನಡದ ಅತ್ಯಂತ ಹಳೆಯ ಶಾಸನ ಯಾವುದು?
ಹಲ್ಮಿಡಿ ಶಾಸನ
19) ಕನ್ನಡದ ಮೊದಲ ದೊರೆ ಯಾರು?
ಮಯೂರವರ್ಮ
20) ನಾಟ್ಯಾ ರಾಣಿ ಎಂಬ ಬಿರುದಿನಿಂದ ಯಾರನ್ನು ಕರೆಯುತ್ತಿದ್ದರು?
ಶಕುಂತಲಾ ದೇವಿ
21) ಮಂಡ್ಯದಲ್ಲಿನ ಸಕ್ಕರೆ ಕಾರ್ಖಾನೆಯು ಯಾರ ಕಾಲದಲ್ಲಿ ಸ್ಥಾಪನೆಯಾಯಿತು?
ಸರ್ ಮಿರ್ಜಾ ಇಸ್ಮಾಯಿಲ್
22) ಯಾರನ್ನು ಕನ್ನಡದ ಕಾಳಿದಾಸ ಎಂದು ಕರೆಯುತ್ತಾರೆ?
ಬಸಪ್ಪ ಶಾಸ್ತ್ರಿ
23) ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿದಾಗ ಇದ್ದಾರ ಯಾರು?
ದೇವರಾಜ್ ಅರಸು (1973)
24) ಕರ್ನಾಟಕ ಸಭಾ ವನ್ನು ಯಾರು ಸ್ಥಾಪಿಸಿದರು?
ಆಲೂರು ವೆಂಕಟರಾಯ
25) ಅಂಕೋಲದಲ್ಲಿ ಯಾರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು?
ಎಂ.ಪಿ ನಾಡಕರ್ಣಿ
26) ಕರ್ನಾಟಕ ಗತವೈಭವ ಎಂಬ ಗ್ರಂಥವನ್ನು ರಚಿಸಿದವರು ಯಾರು?
ಆಲೂರು ವೆಂಕಟರಾಯ
27) ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಯಾವ ನಗರವನ್ನು ಕರೆಯುತ್ತಾರೆ?
ವಿದುರಾಶ್ವತ
28) ಈಸೂರು ಪ್ರಕಾರವು ಯಾವ ಚಳುವಳಿ ಕಾಲದಲ್ಲಿ ನಡೆಯಿತು?
ಭಾರತ ಬಿಟ್ಟು ತೊಲಗಿ ಚಳುವಳಿಯ ಕಾಲದಲ್ಲಿ
29) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಬರೆದವರು ಯಾರು?
ಹುಯಿಗೊಳ್ ನಾರಾಯಣರಾವ್
30) ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡವರು ಯಾರು?
ಮಹಾತ್ಮ ಗಾಂಧೀಜಿ 1924
31) ಹಿಂದುಸ್ತಾನಿ ಸೇವಾದಳ ವನ್ನು ಸ್ಥಾಪಿಸಿದವರು ಯಾರು?
ಎನ್ ಎಸ್ ಹರ್ಡೇಕರ್
32) ಕರ್ನಾಟಕದ ಸಿಂಹ ಎಂದು ಜನಪ್ರಿಯರಾದವರು ಯಾರು?
ಗಂಗಾಧರ ದೇಶಪಾಂಡೆ
33) ಮ್ಯಾಜಿನಿ ಕ್ಲಬ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು?
ಹನುಮಂತರಾಯ ದೇಶಪಾಂಡೆ
34) ಸುರಪುರ ವೆಂಕಟಪ್ಪ ನಾಯಕ ಯಾವ ದಂಗೆಯಿಂದ ಪ್ರಭಾವಗೊಂಡರು?
1857 ಸಿಪಾಯಿ ದಂಗೆ
35) ಯಾವ ಕಾಯ್ದೆಯ ವಿರುದ್ಧ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದರು?
ಶಶಸ್ತ್ರ ಕಾಯ್ದೆ
36) ಬ್ರಿಟಿಷರು ಕೊಡಗನ್ನು ಯಾವಾಗ ವಶಪಡಿಸಿಕೊಂಡರು?
1834
37) ನಗರ ದಂಗೆಯ ನೇತೃತ್ವ ವಹಿಸಿಕೊಂಡರು ಯಾರು?
ಬೂದಿ ಬಸಪ್ಪ 1831
38) ಕಿತ್ತೂರಿನ ದಂಗೆ ಯಾವಾಗ ಪ್ರಾರಂಭವಾಯಿತು?
1824
39) ಬೃಂದಾವನ ಉದ್ಯಾನವನ್ನು ಯಾರು ನಿರ್ಮಿಸಿದರು?
ಸರ್ ಮಿರ್ಜಾ ಇಸ್ಮಾಯಿಲ್
40) ಆಧುನಿಕ ಮೈಸೂರು ನಿರ್ಮಾಪಕ ಎಂದು ಯಾರನ್ನು ಕರೆಯುತ್ತಾರೆ?
ಸರ್ ಎಂ ವಿಶ್ವೇಶ್ವರಯ್ಯ
41) ಮೈಸೂರು ವಿಶ್ವವಿದ್ಯಾಲಯ ಯಾವಾಗ ಪ್ರಾರಂಭವಾಯಿತು?
1916
42) ಯಾರನ್ನು ರಾಜ್ಯ ಋಷಿ ಎಂದು ಕರೆಯುತ್ತಾರೆ?
ನಾಲ್ವಡಿ ಕೃಷ್ಣರಾಜ ಒಡೆಯರು
43) ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು?
ಶೇಷಾದ್ರಿ ಅಯ್ಯರ್
44) ಯಾವಾಗ ಮೈಸೂರನ್ನು ಬ್ರಿಟಿಷರು ವಶಪಡಿಸಿಕೊಂಡರು?
1831ರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ
45) ಯಾವ ಒಪ್ಪಂದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳಾಗಿ ಇಡಲಾಯಿತು?
ಶ್ರೀರಂಗಪಟ್ಟಣ ಒಪ್ಪಂದ ಪ್ರಕಾರ
46) ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೇನಾಧಿಕಾರಿ ಯಾರು?
ಲಾರ್ಡ್ ಕಾರ್ನವಾಲಿಸ್
47) ಎರಡನೇ ಮೈಸೂರ್ ಇದು ಯಾವ ಒಪ್ಪಂದದಿಂದ ಮುಕ್ತಾಯವಾಯಿತು?
ಮಂಗಳೂರು ಒಪ್ಪಂದ
48) ಹೈದರಾಲಿಯು ಯಾವ ಯುದ್ಧದಲ್ಲಿ ಮರಣಹೊಂದಿದನು?
ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ
49) ಮೊದಲನೇ ಆಂಗ್ಲೋ ಮೈಸೂರ್ ಯುದ್ಧ ಯಾವ ಒಪ್ಪಂದದಿಂದ ಮುಕ್ತಾಯವಾಯಿತು?
ಮದ್ರಾಸ್ ಒಪ್ಪಂದ
50) ಹದಿಬದೆಯ ಧರ್ಮದ ಕರ್ತೃ ಯಾರು?
ಸಂಚಿಹೊನ್ನಮ್ಮ
51) ಸಂಚಿ ಹೊನ್ನಮ್ಮಳ ಯಾರ ಆಸ್ಥಾನದಲ್ಲಿದ್ದರು?
ಚಿಕ್ಕದೇವರಾಜ ಒಡೆಯರು
52) ಕನ್ನಡದ ಮೊದಲ ನಾಟಕ?
ಮಿತ್ರವಿಂದ ಗೋವಿಂದ
53) ಎರಡನೇ ಇಬ್ರಾಹಿಮ್ ಆದಿಲ್ ಶಾನ ರಚಿಸಿದ ಕೃತಿ?
ಕಿತಾಬ್ ಇ ನವರಸ್ನಮ್ಮ ಕರ್ನಾಟಕ
ಕರ್ನಾಟಕದ ಒಟ್ಟು ಜನಸಂಖ್ಯೆ
"6,11,30,704"
ಕರ್ನಾಟಕದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ
"ಬೆಂಗಳೂರು ನಗರ"
ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆ
"ಕೊಡಗು/ಮಡಿಕೇರಿ"
ಕರ್ನಾಟಕದ ಒಟ್ಟು ಜನಸಾಂದ್ರತೆ
"319"
ಕರ್ನಾಟಕದ ಒಟ್ಟು ಲಿಂಗಾನುಪಾತ
"973"
ಕರ್ನಾಟಕದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿರುವ ಜಿಲ್ಲೆ
"ಉಡುಪಿ"
ಕರ್ನಾಟಕದ ಒಟ್ಟು ಸಾಕ್ಷರತೆ
"75.36%"
ಕರ್ನಾಟಕದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ
"ದಕ್ಷಿಣ ಕನ್ನಡ"
ಕರ್ನಾಟಕದಲ್ಲಿ ಅತಿ ಕಡಿಮೆ ಸಾಕ್ಷರತೆ ಹೊಂದಿರುವ ಜಿಲ್ಲೆ
"ಯಾದಗಿರಿ"
ಕರ್ನಾಟಕದಲ್ಲಿ ಒಟ್ಟು ಮಕ್ಕಳ ಲಿಂಗಾನುಪಾತ
"948"
ಕರ್ನಾಟಕದ ಅತಿ ದೊಡ್ಡ ಜಿಲ್ಲೆ
"ಬೆಳಗಾವಿ"
ಕರ್ನಾಟಕದ ಅತಿ ಚಿಕ್ಕ ಜಿಲ್ಲೆ
"ಬೆಂಗಳೂರು ನಗರ"
ಕರ್ನಾಟಕದ ಮೊದಲ ಮಹಿಳಾ ಡಿ.ಜಿ ಮತ್ತು ಐ.ಜಿ.ಪಿ
"ನೀಲಮಣಿ. ಎನ್.ರಾಜು"
ಮೈಸೂರು ರಾಜ್ಯದ ಕೊನೆಯ ದಿವಾನ
"ಸರ್ ಆರ್ಕಾಟ್ ಸ್ವಾಮಿ ಮೊದಲಿಯಾರ್"ಕರ್ನಾಟಕದ ಪ್ರಮುಖ ಘಾಟ್ ಗಳು











1) ಚಾರ್ಮುಡಿ ಘಾಟ್=
ಚಿಕ್ಕಮಂಗಳೂರು to ಮಂಗಳೂರು
2) ಶಿರಾಡಿ ಘಾಟ್=
ಹಾಸನ, ಸಕಲೇಶಪುರ to ಮಂಗಳೂರು
3) ಆಗುಂಬೆ ಘಾಟ್=
ಶಿವಮೊಗ್ಗ to ಉಡುಪಿ
4) ಹುಲಿಕಲ್ ಘಾಟ್=
ಶಿವಮೊಗ್ಗ to ಕುಂದಾಪುರ
5) ಸಂಪಂಜೆ ಘಾಟ್ =
ಮಾನೆ to ಮೈಸೂರು
6) ದೇವಿಮನೆ ಘಾಟ್=
ಕುಮಟಾ to ಸಿರ್ಸಿ
7) ಬಿಸಿಲೆ ಘಾಟ್=
ಹಾಸನ್, ಸಕಲೇಶಪುರ, to ಕುಕ್ಕೆ ಸುಬ್ರಮಣ್ಯ
ಕರ್ನಾಟಕದ ಶಿಖರಗಳು 
{ಎತ್ತರದಲ್ಲಿ ಅನುಕ್ರಮವಾಗಿ}










1) ಮುಳ್ಳಯ್ಯನಗಿರಿ ಶಿಖರ
1913M ಚಿಕ್ಕಮಂಗಳೂರು ಜಿಲ್ಲೆ
2) ಬಾಬಾಬುಡನ್ ಗಿರಿ ಶಿಖರ
1894M ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಂಡುಬರುತ್ತದೆ
3) ಕುದುರೆಮುಖ ಶಿಖರ
1892M ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ
4) ದೇವಿರಮ್ಮನ ಬೆಟ್ಟ
1817M ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ
5) ರುದ್ರಗಿರಿ
1751M ಚಿಕ್ಕಮಂಗಳೂರು ಜಿಲ್ಲೆ ಕಂಡುಬರುತ್ತದೆ
6) ಪುಷ್ಪಗಿರಿ
1713M ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ
7) ಬ್ರಹ್ಮಗಿರಿ
1610M ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ
8) ಕೊಡಚಾದ್ರಿ
1343M ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬರುತ್ತದೆಕರ್ನಾಟಕದ ಬಗ್ಗೆ ವಿಶೇಷ ಮಾಹಿತಿ
ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
- ಮಲ್ಲಬೈರೆಗೌಡ.
ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
- ಟಿಪ್ಪು ಸುಲ್ತಾನ್.
ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
- ಚಿತ್ರದುರ್ಗ.
"ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
- ಕೃಷ್ಣದೇವರಾಯ.
ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
- ಪಂಪಾನದಿ.
"ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
- ಹೈದರಾಲಿ.
ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.
ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
- ಕಲಾಸಿಪಾಳ್ಯ.
ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
- ಕೆಂಗಲ್ ಹನುಮಂತಯ್ಯ.
ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
- 8
ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
- "ಸರ್. ಮಿರ್ಜಾ ಇಸ್ಮಾಯಿಲ್"
ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
- ರಾಮಕೃಷ್ಣ ಹೆಗ್ಗಡೆ.
"ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
- ದೇವನಹಳ್ಳಿ (ದೇವನದೊಡ್ಡಿ)
ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
- ವಿಜಯನಗರ ಸಾಮ್ರಾಜ್ಯ.
ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
ತಿರುಮಲಯ್ಯ.
"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
- ಶ್ರೀರಂಗ ಪಟ್ಟಣದ ಕೋಟೆ.
ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.
ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
- ಶಿರಸಿಯ ಮಾರಿಕಾಂಬ ಜಾತ್ರೆ.
ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
ರಾಯಚೂರಿನ ಮೊದಲ ಹೆಸರೇನು?
- ಮಾನ್ಯಖೇಟ.
ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜ ಮಾರ್ಗ
ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.
ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
- ಕರ್ನಲ್ ವಸಂತ್.
ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ.
ಮೈಸೂರು ಅರಮನೆಯ ಹೆಸರೇನು?
- ಅಂಬಾವಿಲಾಸ ಅರಮನೆ.
ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
- ಬಾಬಾ ಬುಡನ್ ಸಾಹೇಬ.
"ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
- ದಾವಣಗೆರೆ.
ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
- ಆಗುಂಬೆ.
ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.
ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
- ಹಲ್ಮಿಡಿ ಶಾಸನ.
ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
- ನೀಲಕಂಠ ಪಕ್ಷಿ.
ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
- ಕೆ.ಸಿ.ರೆಡ್ಡಿ.
ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.
ಕರ್ನಾಟಕದ ಮೊದಲ ಕವಯತ್ರಿ ಯಾರು?
- ಅಕ್ಕಮಹಾದೇವಿ.
ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
- ವಡ್ಡರಾದನೆ.
ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
- ಮೈಸೂರು ವಿಶ್ವವಿಧ್ಯಾನಿಲಯ.
ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
"ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
- ಪುರಂದರ ದಾಸರು.
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
- ರಾಯಚೂರು ಜಿಲ್ಲೆ.
ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.
ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
- ಮಂಡ್ಯ ಜಿಲ್ಲೆ.
ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
- ಗರಗ,
ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
- ಕೊಡಗು.
ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
- ಲಿಂಗನಮಕ್ಕಿ ಅಣೆಕಟ್ಟು.
ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?
- ಕುವೆಂಪುಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಮಾಹಿತಿ 









➤ ನಂದಿ ಬೆಟ್ಟ : ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನ್ನಿಂಗ್‍ಹಾಂನಿಂದ ನಿರ್ಮಿತವಾದ ‘ ಓಕ್‍ಲ್ಯಾಂಡ್’ ಕಟ್ಟಡ ಇಲ್ಲಿದೆ. ಮಹಾತ್ಮಾಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ ‘ ಗಾಂಧಿ ನಿಲಯ’ ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ.
➤ ಬಾಬಾಬುಡನ್‍ಗಿರಿ : ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಈ ಗಿರಿಯಲ್ಲಿ ‘ದಾದ ಹಯಾತ್ ಖಲಂದರ್’ ಎಂಬ ಸಂತನ ‘ ದರ್ಗಾ’ ಮತ್ತು ‘ ದತ್ತಪೀಠ’ ಗಳು ಇವೆ. ತೀರಾ ಇತ್ತೀಚಿನವರೆಗೂ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಈ ಗಿರಿ ಈಗ ವಿವಾದದಲ್ಲಿದೆ.
➤ ಬಿಳಿಗಿರಿರಂಗನಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲ್ಲೂಕಿನಲ್ಲಿದೆ. ಇದನ್ನು ಬಿ.ಆರ್. ಹಿಲ್ಸ್ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಹೆಚ್ಚು ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಸ್ವಾಮಿ ನಿರ್ಮಲಾನಂದರು ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ ಹಾಗೂ ಹೆಸರಾಂತ ಸಮಾಜ ಸೇವಕ ಡಾ. ಸುದರ್ಶನರವರು ಸ್ಥಾಪಿಸಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಗಳು ಇಲ್ಲಿವೆ.
➤ ಮಲೈ ಮಹದೇಶ್ವರ ಬೆಟ್ಟ : ‘ಏಳು ಮಲೆ’ ಎಂದು ಕರೆಯಲ್ಪಡುವ ಮಲೈ ಮಹದೇಶ್ವರ ಬೆಟ್ಟವು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ. ಸಂಪದ್ಭರಿತ ಅರಣ್ಯ ಆವರಿಸಿರುವ ಈ ಬೆಟ್ಟದ ಮೇಲೆ ‘ಮಲೈ ಮಹದೇಶ್ವರ ಸ್ವಾಮಿ’ ದೇವಸ್ಥಾನವಿದೆ.
➤ ಗೋಪಾಲಸ್ವಾಮಿ ಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿರುವ ಈ ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಸ್ಥಾನವಿದೆ.
➤ ಮುಳ್ಳಯ್ಯನಗಿರಿ : ಕರ್ನಾಟಕದ ಅತ್ಯಂತ ಎತ್ತರವಾದ ಶಿಖರವಾದ ಮುಳ್ಳಯ್ಯನಗಿರಿಯು ಚಿಕ್ಕಮಗಳೂರು ಜಿಲ್ಲಿಯಲ್ಲಿದ್ದು, ಸಮುದ್ರ ಮಟ್ಟದಿಂದ 1925 ಮೀ ಎತ್ತರದಲ್ಲಿದೆ. ಚಾರಣಿಗರ ನೆಚ್ಚಿನ ತಾಣವಾಗಿರುವ ಮುಳ್ಳಯ್ಯನಗಿರಿಗೆ ಹಲವು ಪ್ರವಾಸಿಗರು ಆಗಮಿಸುತ್ತಾರೆ.
➤ ಚಾಮುಂಡಿಬೆಟ್ಟ : ಮೈಸೂರು ನಗರಕ್ಕೆ ತೀರಾ ಹತ್ತಿರದಲ್ಲಿರುವ ಇದು, ಈ ಹಿಂದೆ ಮಬ್ರ್ಬಳ ತೀರ್ಥವೆಂದು ಕರೆಯಲ್ಪಡುತ್ತಿದ್ದ ಈ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ ಮತ್ತು ಮಹಿಷಾಸುರನ ಮೂರ್ತಿಗಳು ಇವೆ. ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟದ ಮೆಟ್ಟಿಲ ಬಳಿ ಕರ್ನಾಟಕದ ಬೃಹತ್ ನಂದಿ ವಿಗ್ರಹವಿದೆ
➤ ಕೊಡಚಾದ್ರಿ ಬೆಟ್ಟಗಳು: ಈ ಬೆಟ್ಟವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ನಿಸರ್ಗ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿದೆ. ಈ ಬೆಟ್ಟ ಪ್ರಮುಖವಾದ ಹಾಗೂ ಪ್ರಸಿದ್ಧವಾದ ಯಾತ್ರ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನಲೆಯಲ್ಲಿದೆ.
➤ ಶಿವಗಂಗೆ : ಮಾಗಡಿ ಕೆಂಪೇಗೌಡನಿಂದ ಸ್ಥಾಪಿತವಾದ ಪವಿತ್ರ ಕ್ಷೇತ್ರವಾದ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿದೆ.
➤ ಆದಿಚುಂಚನಗಿರಿ : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.
➤ ಕುಮಾರಸ್ವಾಮಿ ಬೆಟ್ಟ : ಇದು ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನಲ್ಲಿದೆ. ಈ ಬೆಟ್ಟದ ಮೇಲೆ ಶ್ರೀಕುಮಾರಸ್ವಾಮಿ ದೇವಾಲಯವಿದೆ.ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ











ಧೋಂಡಿಯಾ ವಾಘನ ಬಂಡಾಯ
- ಕ್ರಿ.ಶ.1800.
ಕೊಪ್ಪಳದ ವೀರಪ್ಪನಾಯಕನ ಬಂಡಾಯ -1819
ಬೀದರನ ಬಂಡಾಯ -1820
ಸಿಂದಗಿ ಬಂಡಾಯ -1824
ಕಿತ್ತೂರಿನ ಬಂಡಾಯ -1824
ಕೊಡಗಿನ ಬಂಡಾಯ -1839
ಹಲಗಲಿ ಬೇಡರ ದಂಗೆ -1857
ಸುರಪುರ ಬಂಡಾಯ -1857
ನರಗುಂದದ ಬಾಬಾಸಾಹೇಬನ ಬಂಡಾಯ -1858
ಮುಂಡರಗಿಯ ಭೀಮರಾವನ ದಂಗೆ -1858
ಕರ್ನಾಟಕದಲ್ಲಿ ಶಾಂತಿಯುತ ಹೋರಟ ಮ್ಯಾಜಿನಿ ಕ್ಲಬ್ ಸ್ಥಾಪನೆ -1907
ಗಾಂಧೀಜಿ ಕರ್ನಾಟಕಕ್ಕೆ ಆಗಮನ -1915
ಹೋಂರೂಲ್ ಲೀಗ್ ಸ್ಥಾಪನೆ -1916
ಕೆ.ಪಿ.ಸಿ.ಸಿ.ಸ್ಥಾಪನೆ - 1920
ಚರಕ ಸಂಘ ಸ್ಥಾಪನೆ -1920
ಹಿಂದೂಸ್ಥಾನ ಸೇವಾದಳ ಸ್ಥಾಪನೆ -1923
ಬೆಳಗಾವ ಕಾಂಗ್ರೆಸ್ ಅಧಿವೇಶನ -1924 ಡಿಸೆಂಬರ್26-28
ಅಂಕೋಲಾ ಉಪ್ಪಿನ ಸತ್ಯಾಗ್ರಹ -1930
ಶಿವಪುರ ಧ್ವಜ ಸತ್ಯಾಗ್ರಹ -1938,ಏಪ್ರಿಲ್11
ವಿಧುರಾಶ್ವತ ದುರಂತ -1938ಏಪ್ರಿಲ್25
ಈಸೂರು ದುರಂತ -1924,ಸೆಪ್ಟೆಂಬರ್25
ಮೈಸೂರು ಚಲೋ ಚಳುವಳಿ-1947
