SBI SCHOLARSHIP-2025 ಎಸ ಬಿ ಐ ಸ್ಕಾಲರ್ಶಿಪ್ 2025 ಬೇಗನೆ ಅಪ್ಲೈ ಮಾಡಿ

 SBI SCHOLARSHIP-2025 ಎಸ ಬಿ ಐ ಸ್ಕಾಲರ್ಶಿಪ್ 2025 ಬೇಗನೆ ಅಪ್ಲೈ  ಮಾಡಿ 

ಹಾಯ್ ಎಲ್ಲರಿಗೂ ನಮ್ಮ ಸರಳ ಒನ್ ತಂಡದಿಂದ ತಮಗೆ ಆತ್ಮಿಯ ಸ್ವಾಗತ್ ,ಇವತ್ತಿನ ಈ ಬ್ಲಾಗ್ ದಲ್ಲಿ ಒಂದು ವಿಷೇಶವಾದ ಒಂದು ಸ್ಕಾಲರಶಿಪ್ ಬಗ್ಗೆ ಮಾಹಿತಿ ತಂದಿದ್ದೇವೆ ಆದರಿಂದ್ ಇದೆ ತರಹದ ಮಾಹಿತಿಗಾಗಿ ನಮ್ಮ ಸರಳ ಒನ್ ತಂಡದ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ ಆಗಿ ,

ಇವತ್ತಿನ ಈ ಬ್ಲಾಗ್ ದಲ್ಲಿ ನಾವು "ಎಸ ಬಿ ಐ" ಬ್ಯಾಂಕ್ ದ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ನೋಡೋಣ ,ಅದಕ್ಕೆ ಬೇಕಾಗಿರುವ ಅರ್ಹತೆಗಳೇನು ,ಅರ್ಜಿ ಸಲ್ಲಿಸುವುದು ಹೇಗೆ ಮತ್ತು ದಾಖಲಾತಿ ಗಳೇನು ಅನ್ನೋದನ್ನು ನೋಡೋಣ ಬನ್ನಿ  

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿ "SBI ಪ್ಲಾಟಿನಂ ಜುಬಿಲಿ ಆಶಾ  ಎಂಬ ಸ್ಕಾಲರ್‌ಶಿಪ್ ಅನ್ನು  ಆರಂಭಿಸಿದೆ. ಅದರಿಂದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ 20 ಲಕ್ಷ ರೂ.ದವರೆಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಿದೆ . 




ದೇಶದಲ್ಲಿಯೇ  ಅತಿದೊಡ್ಡ ಬ್ಯಾಂಕ್  ಎಂಬ ಹೆಗ್ಗಳಿಕೆಗೆ ಪಾತ್ರವಾದ , ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಒಂದು ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.ಇದು  ಎಸ್‌ಬಿಐ ತನ್ನ 75 ನೇ ವಾರ್ಷಿಕೋತ್ಸವದ ಅಂಗವಾಗಿ ಈ ವಿದ್ಯಾರ್ಥಿವೇತನವನ್ನು ನೀಡಲು  ನಿರ್ಧರಿಸಿದೆ .ಈ ವಿದ್ಯಾರ್ಥಿವೇತನ  ಶಾಲೆಯಿಂದ ಕಾಲೇಜುವರೆಗಿನ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವರೆಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿದ್ಯಾರ್ಥಿವೇತನಕ್ಕಾಗಿ ನೋಂದಣಿ ನವೆಂಬರ್ 15 ರವರೆಗೆ ತೆರೆದಿರುತ್ತದೆ. SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ ಎಂದರೇನು,ಮತ್ತು  ಯಾರುವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆಯಬಹುದು ಮತ್ತು SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಎಸ್‌ಬಿಐ ಫೌಂಡೇಶನ್ "ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ" ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಈ ವಿದ್ಯಾರ್ಥಿವೇತನವು ಶಾಲೆಗಳಲ್ಲಿ ಮತ್ತು  ಕಾಲೇಜುಗಳು, ಐಐಟಿಗಳು, ಐಐಎಂಗಳು, ವೈದ್ಯಕೀಯ ಕಾಲೇಜುಗಳು ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಈ ವಿದ್ಯಾರ್ಥಿವೇತನಗಳು 15,000 ರಿಂದ 20 ಲಕ್ಷ ರೂ.ವರೆಗೆ ಇರುತ್ತವೆ. ಈ ವರ್ಷ ಒಟ್ಟು 23,230 ಅಭ್ಯರ್ಥಿಗಳಿಗೆ ನೀಡಲಾಗುವುದು.

ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಕಾರ್ಯಕ್ರಮಗಳಲ್ಲಿ ಒಂದಾದ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ 2025-26, SBI ಫೌಂಡೇಶನ್‌ನದಿಂದ ಬಿಡುಗಡೆ ಮಾಡಲಾಗಿದೆ  . ಈ ವಿದ್ಯಾರ್ಥಿವೇತನ  ಭಾರತದಾದ್ಯಂತ ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆರ್ಥಿಕ ನೆರವು ನೀಡುವುದು ಇದರ ಪ್ರಮುಖ ಗುರುಯಾಗಿದೆ ಮತ್ತು  ಶಿಕ್ಷಣದ ನಿರಂತರತೆಯನ್ನು ಖಚಿತಪಡಿಸುತ್ತದೆ. ಈ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನವು  9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು  300  ವಿಶ್ವವಿದ್ಯಾಲಯಗಳು/ಕಾಲೇಜುಗಳು ಮತ್ತು IIT ಗಳಿಂದ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾಥಿಗಳಿಗೆ ಮತ್ತು  MBA/PGDM ಕೋರ್ಸ್‌ಗಳನ್ನು ಮಾಡುವವರಿಗೆ  ಮುಕ್ತವಾಗಿದೆ.  ಮತ್ತು ಅದು ಅಲ್ಲದೆ, ವಿದೇಶದಲ್ಲಿ ಅಧ್ಯಯನ ಮಾಡಲು ಆಯ್ಕೆಗೊಳ್ಳುವ   ವಿದ್ಯಾರ್ಥಿಗಳಿಗೂ ಸಹ  ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯತ್ನಗಳನ್ನು ಬೆಂಬಲಿಸಲು ಸುಮಾರು 20 ಲಕ್ಷದವರೆಗೆ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ ಪಡೆಯಬಹುದು.

ಎಸ್‌ಬಿಐ ಫೌಂಡೇಶನ್ ಬಗ್ಗೆ ಸಂಕ್ಷಿಪ್ತ ಮಾಹಿತಿ 

ಎಸ್‌ಬಿಐ ಫೌಂಡೇಶನ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅನ್ನು 2015 ರ ಕಂಪನಿ ಕಾಯ್ದೆ 2013 ರ ಅಡಿಯಲ್ಲಿ ಸೆಕ್ಷನ್ VIII ಕಂಪನಿಯಾಗಿ ಸ್ಥಾಪಿಸಿತು, ಮತ್ತು ಇದು ಎಸ್‌ಬಿಐ ಮತ್ತು ಅದರ ಅಂಗಸಂಸ್ಥೆಗಳ ಸಿಎಸ್‌ಆರ್ ಚಟುವಟಿಕೆಗಳನ್ನು ಯೋಜಿತ ಮತ್ತು ಕೇಂದ್ರೀಕೃತ ರೀತಿಯಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಸಿಎಸ್‌ಆರ್ ಅಂಗವಾದ ಎಸ್‌ಬಿಐ ಫೌಂಡೇಶನ್ ಮೂಲಕ ಭಾರತವನ್ನು ಪರಿವರ್ತಿಸಲು ಆವೇಗವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಮತ್ತು  ಸಮಾಜದ ಸಾಮಾಜಿಕ-ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸುವುದು, ಇದರ ಪ್ರಮುಖ ಉದ್ದೇಶವಾಗಿದೆ ಮತ್ತು ವಿಶೇಷವಾಗಿ ಕಡಿಮೆ ಅದೃಷ್ಟವಂತರು ಮತ್ತು ಹಿಂದುಳಿದ ಸದಸ್ಯರ ಸಾಮಾಜಿಕ-ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸುವುದು ಈ ಫೌಂಡೇಶನ್ ಮುಖ್ಯ ಗುರುಯಾಗಿದೆ  ಮತ್ತು ಅವರೆಲ್ಲರೂ ಹೊಂದಿರುವ ಸಾಮರ್ಥ್ಯಕ್ಕೆ ತಕ್ಕಂತೆ ಬದುಕಲು ಅನುವು ಮಾಡಿಕೊಡುವುದು ಈ  ಮೂಲಕ, ಎಲ್ಲಾ ಭಾರತೀಯರಿಗೆ ಸೇವೆ ಸಲ್ಲಿಸುವ ಮತ್ತು ದೇಶದ ಎಲ್ಲಾ ಭೌಗೋಳಿಕ ಪ್ರದೇಶಗಳಿಗೆ ಯಾವುದೇ ಪ್ರಾದೇಶಿಕ, ಭಾಷಾ, ಜಾತಿ, ಧರ್ಮ, ಧಾರ್ಮಿಕ ಅಥವಾ ಇತರ ಅಡೆತಡೆಗಳಿಲ್ಲದೆ ಸಾಮಾಜಿಕ ಪ್ರಯೋಜನಗಳನ್ನು ತಲುಪಿಸುವ ಸಮಗ್ರ ಅಭಿವೃದ್ಧಿ ಮಾದರಿಯನ್ನು ರಚಿಸುತ್ತದೆ.


ವಿದ್ಯಾರ್ಥಿವೇತನಕ್ಕೆ ಅರ್ಹತೆ ಏನು


SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನದ ಅರ್ಹತೆಗಳನ್ನು ನೋಡುವುದಾದರೆ ಈ ಕೆಳಗಿನಂತಿವೆ 
  • ಭಾರತೀಯ ನಿವಾಸಿ ಆಗಿರಬೇಕು  
  • ಕನಿಷ್ಠ 55% ಅಂಕಗಳು ತೇರ್ಗಡೆ ಹೊಂದಿರಬೇಕು 
  • ಕುಟುಂಬದ ವಾರ್ಷಿಕ ಆದಾಯ ₹೬ ಲಕ್ಷದೊಳಗೆ ಇರಬೇಕು 
  • ಈ ಸ್ಕಾಲರ್ಶಿಪ್ ಗೆ ಸರ್ಕಾರಿ/ಖಾಸಗಿ/ಅನುದಾನಿತ ಶಾಲೆ ಅಥವಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು 
ವಿದ್ಯಾರ್ಥಿವೇತನಕ್ಕೆ ಆಯ್ಕೆಯು ಶೈಕ್ಷಣಿಕ ಅರ್ಹತೆಯ ಮೇಲೆ  ಆಧರಿಸಿರುತ್ತದೆ ಮತ್ತು ಅಭ್ಯರ್ಥಿಗಳು ನೋಂದಣಿ ಸಮಯದಲ್ಲಿ ತಮ್ಮ ಶೈಕ್ಷಣಿಕ ದಾಖಲೆಗಳನ್ನು ಸಹ ಅಪ್‌ಲೋಡ್ ಮಾಡಬೇಕು. ಉದಾಹರಣೆಗೆ, ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ.55% ಅಂಕಗಳು ಅಥವಾ 7.0 CGPA ಪಡೆದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಈ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನದಲ್ಲಿ  ಶೇ.50 ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಮತ್ತು  ಈ ವಿದ್ಯಾರ್ಥಿವೇತನಗಳಲ್ಲಿಶೇ.50 SC ಮತ್ತು ST ಅಭ್ಯರ್ಥಿಗಳಿಗೆ ಮೀಸಲಾಗಿದೆ. ಅಂತಹ ವಿದ್ಯಾರ್ಥಿಗಳ ತಮ್ಮ ಅಂಕಗಳಲ್ಲಿ ಶೇ.10 ಕಡಿತವನ್ನು ಮಾಡಲಾಗುವುದು 

SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳು

ಎಸ್‌ಬಿಐ ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ: 

  • ಅಂಕಗಳೊಂದಿಗೆ ಕೊನೆಯ ವರದಿ ಕಾರ್ಡ್ 
  • ಸರ್ಕಾರದಿಂದ ಗುರುತಿಸಲ್ಪಟ್ಟ ಗುರುತಿನ ಪುರಾವೆ, ಉದಾಹರಣೆಗೆ ಆಧಾರ್ ಅಥವಾ ಪಾಸ್‌ಪೋರ್ಟ್ 
  • ನಿಮ್ಮ ವಿದ್ಯಾರ್ಥಿ ಸ್ಥಿತಿಯನ್ನು ದೃಢೀಕರಿಸುವ ದಾಖಲೆಗಳು 
  • ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ 
  • ಸರ್ಕಾರ ಹೊರಡಿಸಿದ ಅಧಿಕೃತ ದಾಖಲೆ  
  • ಅಭ್ಯರ್ಥಿ ಅಥವಾ ಅಭ್ಯರ್ಥಿಯ ಪೋಷಕರ ಬ್ಯಾಂಕ್ ಖಾತೆ ವಿವರಗಳು 




ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ 

SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹಸಿದವರು ನವೆಂಬರ್ ೧೫ ರ ಒಳಗೆ ಅರ್ಜಿ ಸಲ್ಲಿಸಬೇಕು 

ಅರ್ಜಿ ಸಲ್ಲಿಸುವುದು ಹೇಗೆ 

  • ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ತಾವು ನಾವು ಕೆಳಗೆ ಕೊಟ್ಟಿರುವ ಲಿಂಕ ಮೇಲೆ ಕ್ಲಿಕ್ ಮಾಡಿ.
  • ಮುಖಪುಟದಲ್ಲಿ ಇರುವ ಅಪ್ಲೈ  ಆಯ್ಕೆಯನ್ನು ನೀವು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನೋಂದಾಯಿಸಿಕೊಳ್ಳಬಹುದು.
  • ನೋಂದಣಿ ಪುಟ ತೆರೆಯುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನಮೂದಿಸುವ ಮೂಲಕ ನೀವು ನೋಂದಾಯಿಸಿಕೊಳ್ಳಬಹುದು.
  • ನೋಂದಣಿ ನಂತರ, ಅರ್ಜಿ ನಮೂನೆ ತೆರೆಯುತ್ತದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಆಮೇಲೆ subbmit ಮಾಡಬೇಕು 

Previous Post Next Post